alex Certify ಹೀಗಿದೆ ನೋಡಿ ಮದ್ಯ ಮಾರಾಟದ ಕಂಡೀಷನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿದೆ ನೋಡಿ ಮದ್ಯ ಮಾರಾಟದ ಕಂಡೀಷನ್ಸ್

ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮದ್ಯದ ಅಂಗಡಿಗಳಿಗೆ ಬಾಗಿಲು ತೆರೆಯಲು ಗ್ರೀನ್ ಸ್ನಿಗಲ್ ದೊರಕಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದಿನಿಂದ ಮದ್ಯದಂಗಡಿ ಬಾಗಿಲು ತೆರೆಯಲಾಗಿದ್ದು ಒಬ್ಬರಿಗೆ ಒಂದು ಬಾಟಲ್ ಹಾಗೂ ಅರ್ಧ ಬಾಟಲ್ ಅಥವಾ 90 ಎಂಎಲ್‍ನ 10 ಪೌಚ್ ಮಾರಾಟ ಮಾಡಲು ಮದ್ಯದಂಗಡಿ ಮಾಲೀಕರಿಗೆ ಅವಕಾಶ ನೀಡಲಾಗಿದೆ.

ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಅಂಗಡಿಗಳಲ್ಲಿ ಮಾರಾಟ ದರ ಫಲಕ ಹಾಕಬೇಕು. ಅಂಗಡಿಯಲ್ಲಿ ಒಬ್ಬ ವ್ಯವಸ್ಥಾಪಕ, ಇಬ್ಬರು ಸೇಲ್ ಮಾಡುವ ಸಿಬ್ಬಂದಿ ಇರಬೇಕು. ಈ ಮೂವರೂ ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಧರಿಸಬೇಕು. ಅಂಗಡಿ ಮುಂದೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಬ್ಯಾರಿಕೇಡ್ ನಿರ್ಮಿಸಿಕೊಳ್ಳಬೇಕು. ಇಬ್ಬರು ಸೆಕ್ಯೂರಿಟಿಗಳನ್ನು ನಿಯೋಜಿಸಬೇಕು ಎಂದು ತಿಳಿಸಲಾಗಿದೆ.

ಅಂಗಡಿಯ ಹೊರಭಾಗದಲ್ಲಿ 5ಕ್ಕಿಂತ ಹೆಚ್ಚು ಜನ ಸೇರದ ಹಾಗೆ ನೋಡಿಕೊಳ್ಳಬೇಕು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮದ್ಯ ಮಾರಾಟ ಮಾಡುವ ಹಾಗಿಲ್ಲ. ಸರ್ಕಾರ ಏ.1ರಿಂದ ಹೊಸ ದರ ನಿಗದಿಪಡಿಸಿದ್ದು, ಅದೇ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಅಂಗಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೇರೆ ವಸ್ತುಗಳನ್ನು ಮಾರುವಂತಿಲ್ಲ ಹಾಗೂ ಒಬ್ಬರು ಪೊಲೀಸ್ ಸಿಬ್ಬಂದಿಯನ್ನು ಪ್ರತಿ ಅಂಗಡಿಯಲ್ಲಿ ನೇಮಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮದ್ಯದ ಅಂಗಡಿಯಲ್ಲಿ ನೀರಿನ ಬಾಟಲ್ ಮಾರುವಂತಿಲ್ಲ. ಅಂಗಡಿ ಹತ್ತಿರ ಗೂಡಂಗಡಿ ತೆರೆಯಲು ಅವಕಾಶವಿಲ್ಲ. ಲೋಟ, ಚಿಪ್ಸ್ ನೀಡಲು ಸಹ ಅವಕಾಶವಿಲ್ಲ. ಹಳ್ಳಿಗಳಿಗೆ ಮಾರಾಟ ಮಾಡಲು, ಮಿಲಿಟರಿ ಹೋಟೆಲ್‍ಗಳಿಗೆ ಪೂರೈಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ. ಮುಂಜಾಗ್ರತಾ ಕ್ರಮ ಅನುಸರಿಸದಿದ್ದರೆ ಮದ್ಯದಂಗಡಿ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಎಚ್ಚರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...