alex Certify ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು…?

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಿರಿಯ ನಟಿ, ಸಂಸದೆ ಸುಮಲತಾ, ನನಗೆ ಗೊತ್ತಿರುವಂತೆ ಅಂತವರು ಯಾರೂ ಇಲ್ಲ. ಅಲ್ಲದೇ ಸ್ಯಾಂಡಲ್ ವುಡ್, ಬಾಲಿವುಡ್ ಅಂತ ಬೇರೆಯಿಲ್ಲ, ಎಲ್ಲಾ ಚಿತ್ರರಂಗವೂ ಒಂದೇ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ಇರುವುದನ್ನು ನಾವು ನೋಡಿಲ್ಲ. ಆದರೆ ಇತ್ತೀಚೆಗೆ ಯುವಕರು ಈ ಡ್ರಗ್ ಮಾಫಿಯಾಗೆ ಬಲಿಯಾಗುತ್ತಿರುವುದು ದುರದ್ರಷ್ಟಕರ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಬೆಳಗಾದರೆ ಡ್ರಗ್ ಬೇಕು ಎಂದು ಹೇಳುವವರು ನಮ್ಮ ಚಿತ್ರರಂಗದಲ್ಲಿ ಯಾರೂ ಇಲ್ಲ. ಬೇರೆ ಚಿತ್ರರಂಗದ ಬಗ್ಗೆ ಸುದ್ದಿಯಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...