alex Certify ಸ್ಯಾಂಡಲ್ವುಡ್ ನ ಮೂರು ನಟರಿಗೆ ಇಡಿ ಶಾಕ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ವುಡ್ ನ ಮೂರು ನಟರಿಗೆ ಇಡಿ ಶಾಕ್…?

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಹಾಗೂ ನಟಿ ಸಂಜನಾ ಬಂಧನವಾಗಿದೆ. ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈಗ ಇಡಿ ಕೂಡ ವಿಚಾರಣೆ ಶುರು ಮಾಡಿದೆ. ಇದು ಇನ್ನೂ ಅನೇಕ ಕಲಾವಿದರ ಟೆನ್ಷನ್ ಗೆ ಕಾರಣವಾಗಿದೆ.

ಕನ್ನಡದ ಮೂರು ಹಿರೋಗಳಿಗೆ ಇಡಿ ಶಾಕ್ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕ್ಯಾಸಿನೋ ಪಾರ್ಟಿಯಲ್ಲಿ ಮೂವರು ನಟರು ಪಾಲ್ಗೊಂಡಿದ್ದರು ಎನ್ನಲಾಗಿದೆ. ನಟರು ಆಗಾಗ ಕ್ಯಾಸಿನೋ ಪಾರ್ಟಿಗಳಿಗೆ ಹೋಗಿ ಬರ್ತಿದ್ದರು ಎನ್ನಲಾಗಿದೆ.

ಇವರ ಮೇಲೆ ಇಡಿ ಕಣ್ಣಿಟ್ಟಿದೆ. ಕ್ಯಾಸಿನೋ ಪಾರ್ಟಿಗಳಿಗೆ ಹವಾಲಾ ಹಣ ವಿನಿಮಯವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದ್ರಿಂದ ರಾಗಿಣಿ ಹಾಗೂ ಸಂಜನಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಸಿಬಿ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ. ಇಬ್ಬರೂ ಸಿಸಿಬಿ ವಶದಲ್ಲಿದ್ದಾರೆ. ಇವ್ರ ಕಸ್ಟಡಿ ಮುಗಿದ ನಂತ್ರ ಇಡಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಸಿಸಿಬಿ ಕಚೇರಿಗೆ ಬಂದ ಇಡಿ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...