alex Certify ಸೂಪರ್ ಸ್ಟಾರ್ ಪತ್ನಿಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಸ್ಟಾರ್ ಪತ್ನಿಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: 6.25 ಕೋಟಿ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ವಿರುದ್ಧ ಸಮನ್ಸ್ ಜಾರಿ ಮಾಡುವಂತೆ ಕೋರಿ ಆಡ್ ಬ್ಯೂರೊ ಜಾಹಿರಾತು ಕಂಪನಿ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದೆ.

ರಜನಿಕಾಂತ್ ಅಭಿನಯದ ಕೊಚ್ಚಾಡಿಯನ್ ಚಿತ್ರಕ್ಕೆ ಹಣ ನೀಡಿದ್ದ ವಿಚಾರವಾಗಿ ಆಡ್ ಬ್ಯೂರೊ ಕಂಪನಿ ಇದೀಗ ಲತಾ ರಜನಿಕಾಂತ್ ವಿರುದ್ಧ ಸಮನ್ಸ್ ಜಾರಿಮಾಡುವಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಕೊಚ್ಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಗೆ ಹಣ ನೀಡಿದ್ದ ಆಡ್ ಬ್ಯೂರೊ ಕಂಪನಿ, ಸಿನಿಮಾ ಬಿಡುಗಡೆ ಬಳಿಕ ಬಾಕಿ ಹಣ 6.25 ಕೋಟಿ ರೂ. ನೀಡದೇ ರಜನಿಕಾಂತ್ ಪತ್ನಿ ಲತಾ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ 2014ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಲತಾ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಅಂತಿಮವಾಗಿ ವಂಚನೆ ಪ್ರಕರಣ ಸಂಬಂಧ ಲತಾ ಅವರಿಗೆ ವಿಚಾರಣೆ ಎದುರಿಸುವಂತೆ ಸುಪ್ರೀಂ ಆದೇಶ ನೀಡಿತ್ತು. ಇದೇ ವಿಚಾರವಾಗಿ ಈಗ ಆಡ್ ಬ್ಯೂರೊ ಕಂಪನಿ ಲತಾ ರಜನಿಕಾಂತ್ ವಿರುದ್ಧ ಸಮನ್ಸ್ ಜಾರಿಮಾಡುವಂತೆ ಕೋರಿ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...