alex Certify ಸಿಸಿಬಿ ವಿಚಾರಣೆ ವೇಳೆ ಪ್ರಶಾಂತ್ ಸಂಬರಗಿ ನೀಡಿದ ದಾಖಲೆಗಳೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿಬಿ ವಿಚಾರಣೆ ವೇಳೆ ಪ್ರಶಾಂತ್ ಸಂಬರಗಿ ನೀಡಿದ ದಾಖಲೆಗಳೇನು…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಸಿನಿ ವಿತರಕ ಪ್ರಶಾಂತ್ ಸಂಬರಗಿ ಅವರ ಸಿಸಿಬಿ ವಿಚಾರಣೆ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿಸಿಬಿ ನೀಡಿದ್ದಾಗಿ ಹೇಳಿದ್ದಾರೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಬರಗಿ, ನಟಿ ಸಂಜನಾ ಬಗ್ಗೆ ನಾನು ಯಾವುದೇ ದಾಖಲೆ ನೀಡಿಲ್ಲ. ಸಂಜನಾ ಮಾತ್ರವಲ್ಲ ಯಾವುದೇ ನಟ-ನಟಿಯರ ಬಗ್ಗೆಯೂ ನಾನು ದಾಖಲೆ ನೀಡಿಲ್ಲ. ಐಟಿ ಹಾಗೂ ಇಡಿ ಬಗ್ಗೆ ನಾನು ಏನನ್ನೂ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಶಾಸಕ ಜಮೀರ್ ಅಹ್ಮದ್ ಹಾಗೂ ಶೇಖ್ ಫಾಝಿಲ್ ನಂಟಿನ ಬಗ್ಗೆ ಕೆಲ ದಾಖಲೆಗಳನ್ನು ನಾನು ಸಿಸಿಬಿಗೆ ನೀಡಿದ್ದೇನೆ. ನನ್ನ ಬಳಿ ಇದ್ದ ಡಿಜಿಟಲ್ ದಾಖಲೆ ಒದಗಿಸಿದ್ದೇನೆ. ಆದರೆ ಅಷ್ಟು ದಾಖಲೆಗಳು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ದಾಖಲೆ ಒದಗಿಸಬೇಕು ಎಂದಿದ್ದಾರೆ. ನಾನು ಯಾವೆಲ್ಲ ದಾಖಲೆ ನೀಡಿದ್ದೇನೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನಷ್ಟು ದಾಖಲೆಗಳ ಜತೆ ಮತ್ತೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...