alex Certify ಸಿದ್ದರಾಮಯ್ಯರನ್ನು ಮಾಜಿ ಸಿಎಂ ಎಂದು ಕರಿಬೇಡಿ, ನೋವಾಗುತ್ತೆ ಎಂದ ಮಾಜಿ ಸ್ಪೀಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯರನ್ನು ಮಾಜಿ ಸಿಎಂ ಎಂದು ಕರಿಬೇಡಿ, ನೋವಾಗುತ್ತೆ ಎಂದ ಮಾಜಿ ಸ್ಪೀಕರ್

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಪದೇ ಪದೇ ಮಾಜಿ ಸಿಎಂ ಎಂದು ಕರೆಯುವುದನ್ನು ಕೇಳಿದರೆ ತುಂಬಾ ನೋವಾಗುತ್ತೆ. ಅವರು ಮಾಜಿ ಅಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಗಾಂಧಿ ಭವನದಲ್ಲಿ ಮಾತನಾಡಿದ ರಮೇಶ್ ಕುಮಾರ್, ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಎಂದು ಕರೆದರೆ ಅದು ಅವರಿಗೆ ಮಾಡಿದ ಅಪಮಾನ. ಹಾಗಾಗಿ ಅವರನ್ನು ಮಾಜಿ ಸಿಎಂ ಎಂದು ಕರೆಯಬೇಡಿ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಜನ ಮತ್ತೆ ಇಷ್ಟಪಟ್ಟರೆ, ಸಿದ್ದರಾಮಯ್ಯ ಅವರ ನೋವನ್ನು ಜನರು ಅರ್ಥಮಾಡಿಕೊಂಡು ಅವಕಾಶ ಕೊಟ್ಟರೆ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಬೆಡಿ. ಸಿದ್ದರಾಮಯ್ಯನವರೇ ಎಂದು ಕರೆಯಿರಿ ಅಥವಾ ವಿಪಕ್ಷ ನಾಯಕರೇ ಎಂದು ಕರೆಯಿರಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...