ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವೆಯೇ ಲಸಿಕೆ ಕೊರತೆ ಕೂಡ ಆರಂಭವಾಗಿದ್ದು, ವ್ಯಾಕ್ಸಿನ್ ಸಿಗದಿರುವ ಹಿನ್ನೆಲೆಯಲ್ಲಿ ಸ್ವಪಕ್ಷದ ಸಂಸದರೇ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲಸಿಕೆ ಸಿಗದೇ ಜನರು ಪರದಾಡುತ್ತಿದ್ದಾರೆ. ಜಿಲ್ಲೆಗೆ 40-50 ಸಾವಿರ ಲಸಿಕೆ ಅಗತ್ಯವಿದೆ. ಆದರೆ ಸರ್ಕಾರ ಕೆಲವೇ ಕೆಲವು ಲಸಿಕೆ ಮಾತ್ರ ನೀಡಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಕಿಡಿಕಾರಿದ್ದಾರೆ.
ಸಿಟಿ ಸ್ಕ್ಯಾನ್ ಹಗಲು ದರೋಡೆಗೆ ಮೂಗುದಾರ ಹಾಕಿದ ರಾಜ್ಯ ಸರ್ಕಾರ..!
ಸರ್ಕಾರ ಯಾರಿಗೂ ಲಸಿಕೆ ಇಲ್ಲ ಎಂದು ಹೇಳುವಂತಿಲ್ಲ. ತಕ್ಷಣ ಜಿಲ್ಲೆಗೆ ಲಸಿಕೆ ನೀಡಬೇಕು. ಇಲ್ಲವಾದಲ್ಲಿ ಎಲ್ಲಾ ಜನಪ್ರತಿನಿಧಿಗಳು ಸೇರಿ ಸಿಎಂ ಮನೆ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.