alex Certify BIG NEWS: ಸೂಜಿಮುಕ್ತ ಕೊರೊನಾ ಲಸಿಕೆಗೆ ಚೀನಾ ಅನುಮೋದನೆ; ಉಸಿರಿನ ಮೂಲಕವೇ ತೆಗೆದುಕೊಳ್ಳಬಹುದು ಈ ವ್ಯಾಕ್ಸಿನ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೂಜಿಮುಕ್ತ ಕೊರೊನಾ ಲಸಿಕೆಗೆ ಚೀನಾ ಅನುಮೋದನೆ; ಉಸಿರಿನ ಮೂಲಕವೇ ತೆಗೆದುಕೊಳ್ಳಬಹುದು ಈ ವ್ಯಾಕ್ಸಿನ್‌…!

ಚೀನಾ ಹೊಸ ಬಗೆಯ ಕೊರೊನಾ ಲಸಿಕೆಯೊಂದನ್ನು ಆವಿಷ್ಕರಿಸಿದೆ. ಈ ಲಸಿಕೆಯನ್ನು ಉಚ್ಛ್ವಾಸದ ಮೂಲಕ ಅಂದ್ರೆ ಮೂಗಿನ ಮೂಲಕವೇ ಒಳಕ್ಕೆಳೆದುಕೊಳ್ಳಬಹುದು. ಈ ವ್ಯಾಕ್ಸಿನ್‌ ಅನ್ನು ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ.

ಟಿಯಾಂಜಿನ್ ಮೂಲದ ಕ್ಯಾನ್ಸಿನೊ ಬಯೋಲಾಜಿಕ್ಸ್ ಇಂಕ್ ಈ ಲಸಿಕೆಯನ್ನು ತಯಾರಿಸಿದೆ. ಇದು ಸೂಜಿ-ಮುಕ್ತ ಕೊರೊನಾ ಲಸಿಕೆ. ಇನ್ಹೇಲ್ ಆವೃತ್ತಿಯ ವ್ಯಾಕ್ಸಿನ್‌ ಅನ್ನು ಚೀನಾ ಅನುಮೋದಿಸಿದ ಬೆನ್ನಲ್ಲೇ ಹಾಂಗ್ ಕಾಂಗ್‌ನಲ್ಲಿ ಕಂಪನಿಯ ಷೇರುಗಳ ಮೌಲ್ಯ ಶೇ. 14.5 ರಷ್ಟು ಹೆಚ್ಚಾಗಿದೆ. ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಮಂಡಳಿ CanSinoನ Ad5-nCoV ಅನ್ನು ಬೂಸ್ಟರ್ ಲಸಿಕೆಯಾಗಿ ತುರ್ತು ಬಳಕೆಗೆ ಅನುಮೋದಿಸಿದೆ.

ಲಸಿಕೆ ಕ್ಯಾನ್‌ಸಿನೊದ ಒಂದು-ಶಾಟ್ ಕೋವಿಡ್ ಡ್ರಗ್‌ನ ಹೊಸ ಆವೃತ್ತಿಯಾಗಿದೆ. ಇದು ಮಾರ್ಚ್ 2020ರಲ್ಲಿ ಮಾನವ ಪರೀಕ್ಷೆಗೆ ಒಳಗಾದ ವಿಶ್ವದ ಮೊದಲನೆಯ ವ್ಯಾಕ್ಸಿನ್‌, ಫೆಬ್ರವರಿ 2021ರಲ್ಲಿ ಚೀನಾ, ಮೆಕ್ಸಿಕೊ, ಪಾಕಿಸ್ತಾನ, ಮಲೇಷ್ಯಾ ಮತ್ತು ಹಂಗೇರಿಯಲ್ಲಿ ಇದನ್ನು ಬಳಸಲಾಗಿದೆ. ಈ ಲಸಿಕೆ ಸೆಲ್ಯುಲಾರ್ ಪ್ರತಿರಕ್ಷೆಯನ್ನು ಉತ್ತೇಜಿಸುತ್ತದೆ ಮತ್ತು ಇಂಟ್ರಾಮಸ್ಕುಲರ್ ಇಂಜೆಕ್ಷನ್ ಇಲ್ಲದೆ ರಕ್ಷಣೆಯನ್ನು ಹೆಚ್ಚಿಸಲು ಲೋಳೆಪೊರೆಯ ಪ್ರತಿರಕ್ಷೆಯನ್ನು ಪ್ರೇರೇಪಿಸುತ್ತದೆ.

ಕೊರೊನಾ ವೈರಸ್ ವಿರುದ್ಧ ರಕ್ಷಿಸಲು ಮೂಗಿನ ಮತ್ತು ವಾಯುಮಾರ್ಗದ ಅಂಗಾಂಶಗಳಲ್ಲಿ ಪ್ರತಿಕಾಯಗಳನ್ನು ಉತ್ತೇಜಿಸಲು ಇಂಥದ್ದೇ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಕಂಪನಿಗಳು ಮುಂದಾಗಿವೆ. ಈ ವ್ಯಾಕ್ಸಿನ್‌ಗೆ ಸೂಜಿ ಬಳಸಬೇಕಾಗಿಲ್ಲ. ನಾವೇ ಸ್ವತಃ ವ್ಯಾಕ್ಸಿನ್‌ ತೆಗೆದುಕೊಳ್ಳಬಹುದು. ಹಾಗಾಗಿ ಆರೋಗ್ಯ ಇಲಾಖೆ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಚೀನಾದಲ್ಲಿ ಆವಿಷ್ಕರಿಸಿರುವ ಈ ಲಸಿಕೆ ಕೋವಿಡ್‌ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಶೇ.66ರಷ್ಟು ಪರಿಣಾಮಕಾರಿಯಾಗಿದೆ. ತೀವ್ರತರವಾದ ಕಾಯಿಲೆಯ ವಿರುದ್ಧ ಶೇ.91ರಷ್ಟು ಪರಿಣಾಮಕಾರಿಯಾಗಿದೆ.

ಸಿನೋವಾಕ್ ಬಯೋಟೆಕ್ ಲಿಮಿಟೆಡ್ ಮತ್ತು ಸರ್ಕಾರಿ ಸ್ವಾಮ್ಯದ ಸಿನೋಫಾರ್ಮ್ ಗ್ರೂಪ್ ಕಂಪನಿಯ ಲಸಿಕೆಗಳನ್ನು ಚೀನಾ ಹೊರತುಪಡಿಸಿ ಬೇರೆಡೆ ಕೂಡ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಚೀನಾ ಬೇರೆ ರಾಷ್ಟ್ರಗಳಿಗೆ ಕಳುಹಿಸಿದ ಸುಮಾರು 770 ಮಿಲಿಯನ್ ಡೋಸ್‌ಗಳನ್ನು ಈ ಕಂಪನಿಗಳೇ ಉತ್ಪಾದಿಸಿವೆ. ಈ ಲಸಿಕೆ ಅಸ್ಟ್ರಾಜೆನಿಕಾ ಪಿಎಲ್‌ಸಿ ಮತ್ತು ಜಾನ್ಸನ್ ಮತ್ತು ಜಾನ್ಸನ್ ಅಭಿವೃದ್ಧಿಪಡಿಸಿದ ವ್ಯಾಕ್ಸಿನ್‌ ಅನ್ನು ಹೋಲುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...