alex Certify ಸಂಸದೆ ಸುಮಲತಾ ಅವರನ್ನು ಟೀಕಿಸಿದ ಪ್ರತಾಪ್ ಸಿಂಹರ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದೆ ಸುಮಲತಾ ಅವರನ್ನು ಟೀಕಿಸಿದ ಪ್ರತಾಪ್ ಸಿಂಹರ ವಿಡಿಯೋ ವೈರಲ್

ಮಂಡ್ಯ: ಸಂಸದ ಪ್ರತಾಪ್ ಸಿಂಹ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಟೀಕಿಸಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಸುಮಲತಾ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನೂ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

ಯಲಿಯೂರಿನಲ್ಲಿ ಅಹವಾಲು ಸ್ವೀಕರಿಸುವ ವೇಳೆ ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಬಳಿ ಅಧಿಕಾರಿಯೊಬ್ಬರು ಸಂಸದೆ ಸುಮಲತಾ ವಿರುದ್ಧ ದೂರು ನೀಡಿದ್ದಾರೆ. ಸುಮಲತಾ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಸೋಲಿಸಲು ಮಂಡ್ಯದಲ್ಲಿ ಸುಮಲತಾ ಅವರನ್ನು ಗೆಲ್ಲಿಸಿದರು. ಆದರೆ ಅವರು ಯಾವುದೇ ಕೆಲಸ ಮಾಡುವುವವರಲ್ಲ. ಮಂಡ್ಯಕ್ಕೆ ಸಂಬಂಧಿಸಿದ ಏನೇ ಕೆಲಸಗಳಿದ್ದರೂ ನನಗೆ ಹೇಳಿ ಎಂದಿದ್ದಾರೆ. ಪ್ರತಾಪ್ ಸಿಂಹ, ಸುಮಲತಾ ಅವರನ್ನು ಟೀಕಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...