alex Certify ಶಾಲಾ ವಾರ್ಷಿಕ ಅವಧಿ ಸರಿದೂಗಿಸಲು ಬೇಸಿಗೆ ‘ರಜೆ’ ಕಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ವಾರ್ಷಿಕ ಅವಧಿ ಸರಿದೂಗಿಸಲು ಬೇಸಿಗೆ ‘ರಜೆ’ ಕಡಿತ

ಕೊರೊನಾ ಮಹಾಮಾರಿಯಿಂದಾಗಿ ಶಾಲಾ-ಕಾಲೇಜುಗಳು ಕಳೆದ ಎಂಟು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದವು. ಹೀಗಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುತ್ತಿದ್ದು, ಈಗ ಕೊರೊನಾ ಸೋಂಕು ಕಡಿಮೆಯಾಗಿರುವ ಕಾರಣ ಹಂತಹಂತವಾಗಿ ಶಾಲಾ-ಕಾಲೇಜುಗಳು ಆರಂಭವಾಗುತ್ತಿವೆ.

ಈಗ ಶಾಲಾ – ಕಾಲೇಜುಗಳು ಆರಂಭವಾಗಿದ್ದರೂ ಸಹ ಕೊರೊನಾ ಅವಧಿಯಲ್ಲಿ ತಿಂಗಳಾನುಗಟ್ಟಲೆ ಬಂದ್ ಆಗಿದ್ದ ಕಾರಣ ಆ ಅವಧಿಯನ್ನು ಸರಿದೂಗಿಸುವ ಅನಿವಾರ್ಯತೆ ಇದೆ. ಹೀಗಾಗಿ ಈ ಬಾರಿ ಬೇಸಿಗೆ ರಜೆಯನ್ನು ಕಡಿತಗೊಳಿಸುವುದು ನಿಶ್ಚಿತವಾಗಿದೆ.

ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಸ್ವತಃ ಈ ವಿಷಯ ತಿಳಿಸಿದ್ದು,ಕಳೆದ ವರ್ಷದ ಸಮಯವನ್ನು ಸರಿದೂಗಿಸಲು ಹಾಗೂ ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವುದನ್ನು ತಪ್ಪಿಸುವ ಸಲುವಾಗಿ ಬೇಸಿಗೆ ರಜೆಯನ್ನು ಕಡಿತಗೊಳಿಸಲಾಗುತ್ತದೆ ಆದರೆ ರಜೆಯನ್ನು ರದ್ದುಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...