alex Certify ವಿದ್ಯುತ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ವಿದ್ಯುತ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಪ್ರಿಲ್, ಮೇ ಹಾಗೂ ಜೂನ್ 30ರ ತನಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದೆಂಬ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ.

ಅಲ್ಲದೆ ಈ ಅವಧಿಯಲ್ಲಿ ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ ರಿಯಾಯಿತಿ ನೀಡಲೂ ಸಹ ನಿರ್ಧರಿಸಲಾಗಿದ್ದು, ಇದರ ಜೊತೆಗೆ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ ನ ಫಿಕ್ಸೆಡ್ ಚಾರ್ಜನ್ನು ಏಪ್ರಿಲ್ – ಮೇ ತಿಂಗಳಿಗೆ ಅನ್ವಯವಾಗುವಂತೆ ಮನ್ನಾ ಮಾಡಲಾಗಿದೆ.

ಬೃಹತ್ ಕೈಗಾರಿಕೆಗಳಿಗೂ ಒಂದಷ್ಟು ಅನುಕೂಲ ಮಾಡಲಾಗಿದ್ದು, ಏಪ್ರಿಲ್ – ಮೇ ತಿಂಗಳಿಗೆ ಅನ್ವಯವಾಗುವಂತೆ ಪಾವತಿಸಬೇಕಾಗಿರುವ ವಿದ್ಯುತ್ ಬಿಲ್ ನ ಫಿಕ್ಸೆಡ್ ಚಾರ್ಜನ್ನು ಜೂನ್ 30ರವರೆಗೆ ಮುಂದೂಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...