alex Certify ವಿಡಿಯೋದಲ್ಲಿರುವುದು ನಮ್ಮ ಮಗಳೇ ಎಂದ ಪೋಷಕರು; ವಕೀಲರ ಭೇಟಿಗೆ ನಿರಾಕರಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋದಲ್ಲಿರುವುದು ನಮ್ಮ ಮಗಳೇ ಎಂದ ಪೋಷಕರು; ವಕೀಲರ ಭೇಟಿಗೆ ನಿರಾಕರಿಸಿದ ಪೊಲೀಸರು

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿರುವ ಸಿಡಿ ಯುವತಿಯ ಪೋಷಕರು ಆಡಿಯೋ ಹಾಗೂ ವಿಡಿಯೋದಲ್ಲಿರುವುದು ನಮ್ಮ ಮಗಳೇ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಡಿ ಯುವತಿಯ ತಂದೆ-ತಾಯಿ ಹಾಗೂ ಸಹೋದರರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಆಡಿಯೋ ಹಾಗೂ ವಿಡಿಯೋದಲ್ಲಿರುವುದು ತಮ್ಮ ಮಗಳೆಂದು ಹೇಳಿದ್ದಾರೆ.

ಈ ವೇಳೆ ಯುವತಿಯ ತಂದೆ ಮೊದಲು ತಮ್ಮ ಮಗಳನ್ನು ತೋರಿಸಿ ಆಕೆ ಒಂದುವರೆ ತಿಂಗಳಿಂದ ಎಲ್ಲಿದ್ದಾಳೆ ಎಂದು ಗೊತ್ತಿಲ್ಲ. ಆಕೆಯ ಜೀವಕ್ಕೆ ಅಪಾಯವೂ ಇರಬಹುದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಯುವತಿಯ ಸಹೋದರನಿಂದ 11 ಆಡಿಯೋಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸಿಡಿ ಹಿಂದಿನ ಮಹಾನಾಯಕನ ವಿಚಾರ; ಡಿಕೆಶಿಗೆ ಎಸ್.ಟಿ.ಎಸ್ ಟಾಂಗ್

ಮತ್ತೊಂದೆಡೆ ಯುವತಿ ಪರ ವಕೀಲ ಜಗದೀಶ್, ಯುವತಿಯ ಪೋಷಕರನ್ನು ಭೇಟಿಯಾಗಲು ಆಡುಗೋಡಿ ಎಸ್ಐಟಿ ತಾಂತ್ರಿಕ ವಿಭಾಗದ ಬಳಿ ಬಂದಿದ್ದು, ಈ ಸಂದರ್ಭದಲ್ಲಿ ಯುವತಿ ಪೋಷಕರ ಭೇಟಿಗೆ ಪೊಲೀಸರು ನಿರಾಕರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...