alex Certify ವಾಟ್ಸಾಪ್ ಚಾಟ್‌ನಿಂದಾಗಿ ಕೆಲಸ ಕಳೆದುಕೊಂಡ ಶಿಕ್ಷಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಚಾಟ್‌ನಿಂದಾಗಿ ಕೆಲಸ ಕಳೆದುಕೊಂಡ ಶಿಕ್ಷಕಿ…!

Be careful and think twice before becoming group admin on WhatsApp, facebook- why | Internet & Social Media News | Zee News

ದೇಶದ ಹಿತ ಕಾಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿರತ್ತದೆ. ಏಕೆಂದರೆ ಮಕ್ಕಳಿಗೆ ಸರಿಯಾದ ಬುದ್ದಿ ಹೇಳಿ ಅವರನ್ನು ತಪ್ಪಿದ್ದರೆ ಸರಿ ದಾರಿಗೆ ತಂದು ದೇಶಕ್ಕೆ ಕೊಡುಗೆ ನೀಡುವಂತೆ ಮಾಡುವಲ್ಲಿ ಶಿಕ್ಷಕರೇ ಪ್ರಮುಖರು. ಆದರೆ ಪಾಠ ಹೇಳಿ ಕೊಡುವ ಶಿಕ್ಷಕರೇ ತಪ್ಪು ಮಾಡಿದರೆ ಹೇಗೆ..? ದೇಶದ ಶಾಂತಿಗೆ ಧಕ್ಕೆ ಆಗುವಂತೆ ನಡೆದುಕೊಂಡರೆ ಹೇಗೆ..? ಮಕ್ಕಳು ಅದನ್ನೇ ಕಲಿಯುತ್ತಾರೆ. ಈ ರೀತಿ ಘಟನೆಗಳು ಈ ಹಿಂದೆ ಕೂಡ ನಡೆದಿವೆ. ಶಿಕ್ಷಕ ವೃತ್ತಿ ಒಂದೇ ಅಲ್ಲ ಬೇರೆ ಬೇರೆ ವೃತ್ತಿಯಲ್ಲಿರುವವರು ಈ ರೀತಿ ದೇಶಕ್ಕೆ ಧಕ್ಕೆಯಾಗುವಂತಹ ಪೋಸ್ಟ್ ಹರಿಬಿಟ್ಟಿರುವುದನ್ನು ನೋಡಿದ್ದೇವೆ. ಇದೀಗ ಇಂತಹದ್ದೇ ಘಟನೆ ಮತ್ತೊಮ್ಮೆ ಮರುಕಳಿಸಿದೆ.

ಹೌದು, ರಾಯಚೂರಿನ ಅಂದ್ರೂನ್ ಕಿಲ್ಲಾದ ಶಾಲೆಯ ಶಿಕ್ಷಕಿ ಖಮರುನ್ನೀಸಾ ಬೇಗಂ ತಾವು ಮಾಡಿದ ಪೋಸ್ಟ್ ಸಂಬಂಧ ಇದೀಗ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಪ್ರಧಾನಿ ಹಾಗೂ ರಕ್ಷಣಾ ವ್ಯವಸ್ಥೆಯ ಬಗ್ಗೆ ಜೊತೆಗೆ ದೇಶದ ಶಾಂತಿಗೆ ಭಂಗ ತರುವಂತಹ ಪೋಸ್ಟ್ ಅನ್ನು ಈ ಶಿಕ್ಷಕಿ ಮಾಡಿದ್ದಾರೆ.

ಶಾಲೆಯ ಶಿಕ್ಷಕರ ವಾಟ್ಸಾಪ್ ಗ್ರೂಪ್‌ನಲ್ಲಿ ಉರ್ದು ಭಾಷೆಯಲ್ಲಿ ದೇಶದ ಶಾಂತಿಗೆ ಧಕ್ಕೆ ತರುವ ಪೋಸ್ಟ್‌ಗಳನ್ನು ಇವರು ಹಾಕಿದ್ದರಿಂದ ಈ ಶಿಕ್ಷಕಿಯನ್ನು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ ಅಮಾನತು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...