alex Certify ಲಾಕ್ ಡೌನ್ ‘ಸ್ಟ್ರೆಸ್’ ನಿಂದ ದೂರವಿರಲು ಇಲ್ಲಿದೆ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ‘ಸ್ಟ್ರೆಸ್’ ನಿಂದ ದೂರವಿರಲು ಇಲ್ಲಿದೆ ಉಪಾಯ

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌಕ್ ಘೋಷಿಸಿರುವುದರಿಂದ ಬಹುತೇಕ ಎಲ್ಲೆಡೆ ವರ್ಕ್ ಫ್ರಮ್ ಹೋಮ್ ಜಾರಿಯಲ್ಲಿದೆ. ಇದರಿಂದ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗಿದೆ.

ಇದರಿಂದ ಹೊರಬರಲು, ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಳ್ಳಿ. ಮಕ್ಕಳೊಂದಿಗೆ ಆಡಲು ಸಮಯ ಮೀಸಲಿಡಿ.

ಸಾಧ್ಯವಾದರೆ ಸಂಜೆ ವೇಳೆ ಅಂಗಳದಲ್ಲಿ ಇಲ್ಲವೇ ಟೆರೇಸ್ ಮೇಲೆ ಕ್ರಿಕೆಟ್ ಇಲ್ಲವೇ ಇತರ ಔಟ್ ಡೋರ್ ಆಟಗಳನ್ನು ಆಡಿ. ಮನೆಯವರೊಂದಿಗೆ ಸಮಯ ಕಳೆಯಿರಿ.

ನಿಮ್ಮ ಇಷ್ಟದ ನಟ – ನಟಿಯರ ಚಿತ್ರಗಳನ್ನು ವೀಕ್ಷಿಸಿ. ಮನೋರಂಜನೆಗಾಗಿ ಸಮಯ ಮೀಸಲಿಡಿ. ಅಡುಗೆ ಮನೆಯಲ್ಲಿ ನಿಮಗಿಷ್ಟದ ತಿನಿಸು ತಯಾರಿಸಿ ತಿನ್ನಿ.

ಕೆಲಸಕ್ಕೆ ಸಮಯವನ್ನು ನಿಗದಿಪಡಿಸಿ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸಿ. ಆರೋಗ್ಯ ಕಾಪಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...