alex Certify ರೈಲು ಸಂಚಾರದ ಕುರಿತು ಪ್ರಯಾಣಿಕರಿಗೆ ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಸಂಚಾರದ ಕುರಿತು ಪ್ರಯಾಣಿಕರಿಗೆ ಇಲ್ಲಿದೆ ಡಿಟೇಲ್ಸ್

ನಾಲ್ಕನೆ ಹಂತದ ಲಾಕ್ ಡೌನ್ ಸಡಿಲಿಕೆ ಬಳಿಕ ರೈಲು ಸಂಚಾರ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಬೆಂಗಳೂರು – ಮೈಸೂರು ಹಾಗೂ ಬೆಂಗಳೂರು – ಬೆಳಗಾವಿ ನಡುವೆ ಸಂಚಾರ ನಡೆಸುತ್ತಿದೆ. ಜೂನ್ 1ರಿಂದ ಹೊರ ರಾಜ್ಯಗಳಿಗೂ ರೈಲು ಸಂಚಾರ ಆರಂಭವಾಗುತ್ತಿದೆ.

ರೈಲುಗಳ ಸಂಚಾರದ ಕುರಿತು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ. ಜೂನ್ 1ರಿಂದ ಬೆಂಗಳೂರು – ಹುಬ್ಬಳ್ಳಿ, ಯಶವಂತಪುರ – ಶಿವಮೊಗ್ಗ, ವಾಸ್ಕೋಡಗಾಮ / ಹುಬ್ಬಳ್ಳಿ – ಹಜರತ್ ನಿಜಾಮುದ್ದೀನ್, ಬೆಂಗಳೂರು – ದಾನಪುರ, ಮುಂಬೈ ಕಂಟೋನ್ಮೆಂಟ್ – ಬೆಂಗಳೂರು, ಮುಂಬೈ ಕಂಟೋನ್ಮೆಂಟ್ – ಗದಗ ನಡುವೆ ರೈಲುಗಳು ಸಂಚರಿಸಲಿವೆ.

ಜೂನ್ 2 ರಿಂದ ಯಶವಂತಪುರ – ಹಜರತ್ ನಿಜಾಮುದ್ದೀನ್, ಶಿವಮೊಗ್ಗ – ಯಶವಂತಪುರ, ಬೆಂಗಳೂರು – ಮುಂಬೈ ಕಂಟೋನ್ಮೆಂಟ್, ಹೌರಾ – ಯಶವಂತಪುರ, ಗದಗ – ಮುಂಬೈ ಕಂಟೋನ್ಮೆಂಟ್ ನಡುವೆ ಸಂಚರಿಸಲಿದ್ದು, ಜೂನ್ 3ರಿಂದ ಹಜರತ್ ನಿಜಾಮುದ್ದೀನ್ – ವಾಸ್ಕೊಡಗಾಮ / ಹುಬ್ಬಳ್ಳಿ ಮತ್ತು ದಾನಪುರ – ಕೆಎಸ್ಆರ್ ಬೆಂಗಳೂರು ನಡುವೆ ಈ ರೈಲುಗಳು ಸಂಚರಿಸಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...