alex Certify ರಾಹುಲ್ ಗಾಂಧಿ ನೀಡಿದ ಪ್ರೋತ್ಸಾಹದ ಬಗ್ಗೆ ಮಾತನಾಡಿದ ರಮ್ಯಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿ ನೀಡಿದ ಪ್ರೋತ್ಸಾಹದ ಬಗ್ಗೆ ಮಾತನಾಡಿದ ರಮ್ಯಾ..!

ನಟಿ ರಮ್ಯಾ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ನಂತರ ರಾಜಕೀಯದಲ್ಲಿ ಸಕ್ರಿಯರಾದ ಈ ನಟಿ ಒಂದಿಷ್ಟು ವರ್ಷಗಳ ನಂತರ ರಾಜಕೀಯದಿಂದಲೂ ದೂರ ಸರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತೆ ಸಕ್ರಿಯರಾಗಿರುವ ಈ ನಟಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಮ್ಯಾ, ಸಿನಿಮಾ ಜಗತ್ತು ಬಿಟ್ಟು ರಾಜಕೀಯಕ್ಕೆ ಬಂದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಷ್ಟೆ ಅಲ್ಲ ಮೂರು ವರ್ಷಗಳ ಕಾಲ ಸದ್ದಿಲ್ಲದೇ ಇದ್ದ ಅವರ ದಿನಗಳು ಹೇಗಿದ್ದವು. ಇಂದು ಏನು ಮಾಡುತ್ತಿದ್ದಾರೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಾವು ಕಲಿತ ವೇದಾಂತದ ಕೋರ್ಸ್ ಬಗ್ಗೆಯೂ ಮಾತನಾಡಿದ್ದಾರೆ.

ಇದರ ಜೊತೆಗೆ ತಾವು ರಾಜಕೀಯದಲ್ಲಿದ್ದಾಗ ರಾಹುಲ್ ಗಾಂಧಿಯವರು ತಮಗೆ ಮಾಡಿದ ಪ್ರೋತ್ಸಾಹ ಯಾವ ರೀತಿಯಲ್ಲಿತ್ತು ಎಂಬುದನ್ನು ತಿಳಿಸಿದ್ದಾರೆ.

ರಾಜಕೀಯದಲ್ಲಿದ್ದಾಗ ರಾಹುಲ್ ಗಾಂಧಿಯವರು ಸಾಕಷ್ಟು ಪ್ರೋತ್ಸಾಹ ನೀಡಿದರು. ರಾಜಕೀಯದ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿಕೊಟ್ಟರು. ಚುನಾವಣೆಗೂ ಮುನ್ನವೇ ನಾನು ರಾಜಿನಾಮೆ ನೀಡಿದ್ದೆ. ಆದರೆ ಅದನ್ನು ಸ್ವೀಕಾರ ಮಾಡಿರಲಿಲ್ಲ. ಒಬ್ಬ ನಾಗರೀಕಳಾಗಿ ನನ್ನ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಹೊಸ ಆಯಾಮ ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...