alex Certify ರಾಗಿಣಿ ಬಳಿಕ ಇಂದು ಮತ್ತೊಬ್ಬ ನಟಿ ಪರಪ್ಪನ ಅಗ್ರಹಾರ ಪಾಲು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಗಿಣಿ ಬಳಿಕ ಇಂದು ಮತ್ತೊಬ್ಬ ನಟಿ ಪರಪ್ಪನ ಅಗ್ರಹಾರ ಪಾಲು…?

ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಕುರಿತು ನಡೆಯುತ್ತಿರುವ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದಲ್ಲಿ ಈಗಾಗಲೇ ನಟಿಯರಾದ ರಾಗಿಣಿ ಹಾಗೂ ಸಂಜನಾ ಬಂಧನಕ್ಕೊಳಗಾಗಿದ್ದು, ಈ ಪೈಕಿ ರಾಗಿಣಿ ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ.

ನಟಿ ಸಂಜನಾರನ್ನು ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದ್ದು, ಇಂದು ಅವರ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಸಂಜನಾ ಕೂಡ ರಾಗಿಣಿಯಂತೆ ಇಂದು ಜೈಲು ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

ಇದರ ಮಧ್ಯೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದ್ದು, ನಟ ದಿಗಂತ್ ಹಾಗೂ ಅವರ ಪತ್ನಿ ಐಂದ್ರಿತಾ ರೇ ಅವರಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅವರಿಬ್ಬರು ಇಂದು ವಿಚಾರಣೆಗೆ ಹಾಜರಾದ ಬಳಿಕ ಅವರನ್ನೂ ಬಂಧನಕ್ಕೊಳಪಡಿಸಲಾಗುತ್ತದಾ ಎಂಬ ಕುತೂಹಲ ಮನೆಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...