alex Certify ಮೈ ಜುಮ್ಮೆನಿಸುತ್ತೆ ಪುಟ್ಟ ಬಾಲಕನ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಜುಮ್ಮೆನಿಸುತ್ತೆ ಪುಟ್ಟ ಬಾಲಕನ ಈ ವಿಡಿಯೋ

ಪುಟ್ಟ ಬಾಲಕನೊಬ್ಬ ಹೆಡೆಯೆತ್ತಿ ನಿಂತಿದ್ದ ಭಾರಿ ಗಾತ್ರದ ನಾಗರ ಹಾವನ್ನು ಮುಟ್ಟಿದರೂ ಸಹ ಅದು ಕಚ್ಚದೆ ಹಾಗೆ ಸುಮ್ಮನೆ ಹೋಗಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಬಾಲಕ ಪಾರಾಗಿದ್ದಾನೆ.

ಇಂತಹುದೊಂದು ಘಟನೆ ಬೆಳಗಾವಿ ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ನಡೆದಿದ್ದು, ರಾಜು ಪಾಟೀಲ ಎಂಬವರು ಜಮೀನಿನಲ್ಲಿ ತಮ್ಮ ಎರಡು ವರ್ಷದ ಪುತ್ರನ ವಿಡಿಯೋ ಮಾಡುತ್ತಿದ್ದರು.

ಈ ವೇಳೆ ಬಾಲಕ ಅಲ್ಲಿಯೇ ಇದ್ದ ನಾಗರಹಾವನ್ನು ಮುಟ್ಟಿದ್ದು, ಇದು ವಿಡಿಯೋ ಮಾಡುತ್ತಿದ್ದ ತಂದೆಗೆ ಗೊತ್ತಾಗಿರಲಿಲ್ಲ. ಹಾವು ಕಚ್ಚದೆ ಹಾಗೆಯೇ ಹೋಗಿದ್ದು, ಆಗ ಇದನ್ನು ಗಮನಿಸಿದ ರಾಜು ಪಾಟೀಲ ಗಾಬರಿಯಿಂದ ಓಡಿ ಹೋಗಿ ಮಗನನ್ನು ಎತ್ತಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...