alex Certify ಮೂರು ಹೆಸರಲ್ಲಿ ಡ್ರಗ್ ಡೀಲ್ ಮಾಡುತ್ತಿದ್ದ ಕಿಂಗ್ ಪಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಹೆಸರಲ್ಲಿ ಡ್ರಗ್ ಡೀಲ್ ಮಾಡುತ್ತಿದ್ದ ಕಿಂಗ್ ಪಿನ್

ಬೆಂಗಳೂರು: ಡ್ರಗ್ಸ್ ಕಿಂಗ್ ಪಿನ್ ಅನಿಕಾ ಕುರಿತಾಗಿ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಅನಿಕಾ ಮೂರು ಹೆಸರುಗಳಲ್ಲಿ ಡ್ರಗ್ಸ್ ಡೀಲ್ ಮಾಡುತ್ತಿದ್ದಳು ಎಂಬ ವಿಷಯ ಹೊರಬಂದಿದೆ.

ಬಂಧಿತ ಡ್ರಗ್ಸ್ ಕಿಂಗ್ ಪಿನ್ ಅನಿಕಾಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿರುವ ಎನ್ ಸಿ ಬಿ ಅಧಿಕಾರಿಗಳು, ಅನಿಕಾ ತಮಿಳುನಾಡಿನ ಮೂಲದವಳಾಗಿದ್ದಾಳೆ. ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದಳು. ದೊಡ್ಡಗುಬ್ಬಿ ಬಳಿಯ ಐಶ್ವರ್ಯ ನಿವಾಸದಲ್ಲಿ ವಾಸವಾಗಿದ್ದಳು.

ನೋಡ ನೋಡುತ್ತಿದ್ದಂತೆಯೇ ಎರಡು ವರ್ಷಗಳಲ್ಲಿ ಅನಿಕಾ ಡ್ರಗ್ ಪೆಡ್ಲರ್ ಆಗಿ ಬದಲಾಗಿದ್ದಳು. ಅನಿಕಾ ಮೂರು ಹೆಸರಲ್ಲಿ ಡ್ರಗ್ ಡೀಲ್ ಮಾಡುತ್ತಿದ್ದಳು. ಅನಿಕಾ ಡಿ, ಅನಿ ಮತ್ತು ಬಿ ಮನಿ ಎಂಬ ಹೆಸರಲ್ಲಿ ಡೀಲ್ ಮಾಡುತ್ತಿದ್ದಳು. ಟೆಲಿಗ್ರಾಮ್, ವಾಟ್ಸಪ್ ಮೂಲಕ ಬಿ ಮನಿ ಎಂಬ ಕೋಡ್ ವರ್ಡ್ ಮೂಲಕ ಡ್ರಗ್ ಡೀಲ್ ಮಾಡುತ್ತಿದ್ದು, ಆಕೆಗೆ ಹಲವು ಸ್ಟಾರ್ ನಟರ ಸಂಪರ್ಕವಿತ್ತು ಎಂದು ತಿಳಿದು ಬಂದಿದೆ.

ತಮಿಳುನಾಡಿನ ಸೇಲಂ ಮೂಲದವಳಾದ ಅನಿಕಾಳಿಗೆ ಓರ್ವ ತಂಗಿ ಹಾಗೂ ತಮ್ಮ ಕೂಡ ಇದ್ದಾರೆ. ಮೂವರು ಮಕ್ಕಳಲ್ಲಿ ಅನಿಕಾ ಹಿರಿಯಳು ಎಂದು ಎನ್ ಸಿಬಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...