alex Certify ʼಕಡಕ್ ಮಾಲ್ ಥಾʼ ಡ್ರಗ್ ಮಾಫಿಯಾಗೆ ಫಿಲ್ಮಿ ಡೈಲಾಗ್ ಮೂಲಕ‌ ಎಚ್ಚರಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಡಕ್ ಮಾಲ್ ಥಾʼ ಡ್ರಗ್ ಮಾಫಿಯಾಗೆ ಫಿಲ್ಮಿ ಡೈಲಾಗ್ ಮೂಲಕ‌ ಎಚ್ಚರಿಸಿದ ಪೊಲೀಸರು

ದೆಹಲಿ, ಮುಂಬೈ, ಪುಣೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸವನ್ನು ಆಗಾಗಿ ಮಾಡುತ್ತಿರುತ್ತಾರೆ. ಇದೀಗ ಅಸ್ಸಾಂ‌ ಪೊಲೀಸರೂ ಸಹ ಇದೇ ದಾರಿ ಅನುಸರಿಸಿ ಗಮನ‌ ಸೆಳೆದಿದ್ದಾರೆ.

ಕಡಕ್ ಮಾಲ್ ಥಾ ಎಂಬ ಸಾಲು ಇರುವ ಮೆಮೆ ರಚಿಸಿರುವ ಪೊಲೀಸರು ಮಾದಕ ವಸ್ತು ಜಾಲಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ʼಫಿರ್ ಹೇರಾ ಪೇರಿʼ ಚಿತ್ರದಲ್ಲಿನ ಒಂದು ಡೈಲಾಗ್ “ಕಡಕ್ ಮಾಲ್ ಹೈ”, ಅದನ್ನು ಆಧಾರವಾಗಿಟ್ಟುಕೊಂಡು ಅಸ್ಸಾಂ‌ ಪೊಲೀಸರು “ಕಡಕ್ ಮಾಲ್ ಥಾ” ಎಂದು ಬದಲಿಸಿದ್ದು, ಈ ಸಾಲಿನ‌ ಹಿಂದೆ ಮಾದಕ ವಸ್ತು ನಾಶಪಡಿಸುತ್ತಿರುವ ಚಿತ್ರವಿದೆ.

ಫಿರ್ ಹೇರಾ ಪೇರಿ ಚಿತ್ರದಲ್ಲಿನ‌ ಒಂದು ಸಂದರ್ಭದಲ್ಲಿ‌‌ ಕಲಾವಿದ ಮನೋಜ್ ಜೋಶಿ “ಕಡಕ್ ಮಾಲ್ ಹೈ” ಎಂದು ಹೇಳುತ್ತಾರೆ. ಆ ಸನ್ನಿವೇಶ ನೆನಪಿಸುವಂತೆ ಮೆಮೆ ರಚಿಸಲಾಗಿದೆ. ಡ್ರಗ್ ಮಾಫಿಯಾ ಗುರಿಯಾಗಿಸಿ ಎಚ್ಚರಿಕೆ ನೀಡಿರುವುದು ಕಂಡುಬರುತ್ತದೆ.

ನೆಟ್ಟಿಗರು ಇದನ್ನುಕಂಡು ಅಚ್ಚರಿ ವ್ಯಕ್ತಪಡಿಸಿ, ಪೊಲೀಸರ ಕ್ರಿಯಾಶೀಲತೆಗೆ ಶಬ್ಬಾಸ್‌ಗಿರಿ ನೀಡಿದ್ದಾರೆ.

— Hardi Singh (@HardiSpeaks) August 3, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...