alex Certify ಮೂತ್ರದ ಬದಲು ನೀರು ತುಂಬಿ ಕೊಟ್ಟಿದ್ದ ನಟಿ ರಾಗಿಣಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರದ ಬದಲು ನೀರು ತುಂಬಿ ಕೊಟ್ಟಿದ್ದ ನಟಿ ರಾಗಿಣಿ…!

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಮಾಡುತ್ತಿರುವ ನಖರಾಗಳು ತನಿಖಾಧಿಕಾರಿಗಳಿಗೆ ತಲೆನೋವು ತಂದಿದೆ ಎನ್ನಲಾಗಿದೆ. ಆರಂಭದಿಂದಲೂ ತನಿಖಾಧಿಕಾರಿಗಳ ದಿಕ್ಕುತಪ್ಪಿಸಲು ಈ ಇಬ್ಬರೂ ಯತ್ನಿಸುತ್ತಿದ್ದು, ಆದರೆ ಪಟ್ಟು ಬಿಡದ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಇದರ ಮಧ್ಯೆ ಗುರುವಾರದಂದು ರಾಗಿಣಿ ಹಾಗೂ ಸಂಜನಾರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ಸಂದರ್ಭದಲ್ಲೂ ಸಹ ಇಬ್ಬರು ನಟಿಯರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋದಲ್ಲಿ ವೈದ್ಯಕೀಯ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿರುವ ನಟಿ ರಾಗಿಣಿ, ನನ್ನ ಜೀವನ ಈಗಾಗಲೇ ಹಾಳಾಗಿದೆ. ಪರೀಕ್ಷೆಯಲ್ಲಿ ಸಿಕ್ಕಿಹಾಕಿಕೊಂಡರೆ ನಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದರ ಜೊತೆಗೆ ಮೂತ್ರ ಪರೀಕ್ಷೆಗೆ ಸ್ಯಾಂಪಲ್ ನೀಡುವ ಬಾಟಲಿಯಲ್ಲಿ ನೀರು ತುಂಬಿಸಿ ಕೊಟ್ಟಿದ್ದರೆಂದು ಸಹ ಹೇಳಲಾಗಿದೆ. ಇದು ವೈದ್ಯರ ಗಮನಕ್ಕೆ ಬಂದ ಬಳಿಕ ತಪ್ಪೊಪ್ಪಿಕೊಂಡ ರಾಗಿಣಿ ಬಳಿಕ ಸ್ಯಾಂಪಲ್ ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...