alex Certify ಮುಂಗಾರಿಗೂ ಮುನ್ನವೇ ಕೊಡಗು‌ ಕೂಲ್‌ ಕೂಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಗಾರಿಗೂ ಮುನ್ನವೇ ಕೊಡಗು‌ ಕೂಲ್‌ ಕೂಲ್…!

ಮಳೆಗಾಲದಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯ ನೋಡೋದೇ ಒಂದು ಚಂದ. ಎಂತಹ ಚಿಂತೆಯನ್ನೂ ಮರೆಸುವ ಶಕ್ತಿ ಪ್ರಕೃತಿಗೆ ಇದೆ. ಎಷ್ಟೋ ಮಂದಿ ಕೊಡಗಿನ ಅನೇಕ ಸ್ಥಳಗಳನ್ನು ನೋಡಲು ಮಳೆಗಾಲವನ್ನು ಕಾಯುತ್ತಾರೆ. ಆದರೆ ಈ ವರ್ಷ ಮಾತ್ರ ಮುಂಗಾರಿಗೂ ಮುನ್ನವೇ ಕೊಡಗು ಜನಕ್ಕೆ ಪ್ರಕೃತಿಯ ಸೌಂದರ್ಯ ಲಭಿಸಿದೆ.

ಹೌದು, ನಿಸರ್ಗ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಮಳೆ ಗಾಳಿ ಜೋರಾಗಿದೆ. ಹೀಗಾಗಿ ಕೊಡಗಿನಲ್ಲೂ ತುಂತುರು ಮಳೆ ಪ್ರಾರಂಭವಾಗಿದ್ದು, ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ. ಮುಂಗಾರಿಗೂ ಮುನ್ನವೇ ಕೊಡಗು-ಮಡಿಕೇರಿ ಫುಲ್ ಕೂಲ್ ಆಗಿದೆ.

ಮಂಜು ಹೆಚ್ಚಾಗಿ ಇರುವುದರಿಂದ ಈ ಭಾಗದಲ್ಲಿ ಸೂಯಾಸ್ತಕ್ಕೂ ಮುನ್ನವೇ ಕತ್ತಲಾದಂತಿದೆ. ಅಲ್ಲದೆ ತುಂತುರು ಮಳೆಯಿಂದ ಮುಂಗಾರು ಆರಂಭವಾಯ್ತೇನೋ ಎಂಬ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ ಅಲ್ಲಿನ ಜನತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...