alex Certify ‘ಮಾಸ್ಕ್’ ಧರಿಸದೆ ಮನೆಯಿಂದ ಹೊರ ಬಿದ್ದೀರಿ ಜೋಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಾಸ್ಕ್’ ಧರಿಸದೆ ಮನೆಯಿಂದ ಹೊರ ಬಿದ್ದೀರಿ ಜೋಕೆ…!

ದೇಶದಲ್ಲಿ ಮಾರಣಾಂತಿಕ ಕರೋನಾ ವಕ್ಕರಿಸಿಕೊಂಡಿರುವ ಪರಿಣಾಮ ಕೇಂದ್ರ ಸರ್ಕಾರ ಇದರ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ಸಾರ್ವಜನಿಕರು ಮಾಸ್ಕ್ ಧರಿಸಬೇಕು ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಆದರೆ ಬಹುತೇಕರು ಈ ನಿಯಮಗಳನ್ನು ಉಲ್ಲಂಘಿಸುವ ಮೂಲಕ ತಾವೂ ತೊಂದರೆಗೆ ಸಿಲುಕುತ್ತಿರುವುದಲ್ಲದೇ ಇತರೆಯವರಿಗೂ ಮಾರಣಾಂತಿಕವಾಗಿ ಪರಿಣಮಿಸುತ್ತಿದ್ದಾರೆ. ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯಾಡಳಿತಗಳು ಮುಂದಾಗಿವೆ.

ಮಾಸ್ಕ್ ಧರಿಸದೆ ತಿರುಗುವವರಿಗೆ 100 ರೂ.ಗಳಿಂದ 1 ಸಾವಿರ ರೂ.ಗಳವರೆಗೆ ದಂಡ ವಿಧಿಸಲು ಕೆಲವೊಂದು ಸ್ಥಳೀಯ ಸಂಸ್ಥೆಗಳು ತೀರ್ಮಾನಿಸಿದ್ದು, ಜೊತೆಗೆ ಎಲ್ಲೆಂದರಲ್ಲಿ ಉಳುವವರಿಗೂ ದಂಡದ ಬಿಸಿ ತಟ್ಟಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...