ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 87 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಅನೇಕ ರಾಜಕೀಯ ಗಣ್ಯರು ಇವರಿಗೆ ವಿಶ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.
ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಶ್ರೀಲಂಕಾ ಪ್ರಧಾನಿ, ಸಿಎಂ ಯಡಿಯೂರಪ್ಪ ಸೇರಿದಂತೆ ಸಾಕಷ್ಟು ಮಂದಿ ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ.
ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳ ಹುಟ್ಟುಹಬ್ಬ ಆಚರಿಸಿಕೊಳ್ಳಲು ದೇವೇಗೌಡರು ತೀರ್ಮಾನಿಸಿದ್ದರು. ಹೀಗಾಗಿ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಮನೆ ಬಳಿ ಬಾರದಂತೆ ಮನವಿ ಮಾಡಿದ್ದರು.
ಕೊರೋನಾ ಹಿನ್ನಲೆಯಲ್ಲಿ ಜನ ಸೇರುವುದು ಅಪಾಯಕಾರಿ. ಹಾಗಾಗಿ ಯಾರೂ ಕೂಡಾ ಮನೆ ಬಳಿ ಬರಬೇಡಿ. ತಾವೆಲ್ಲರೂ ಇದ್ದಲ್ಲಿಂದಲೇ ಹರಸಿ ದೇಶದ ಇಂದಿನ ಸ್ಥಿತಿ ಆತಂಕಕಾರಿಯಾಗಿದೆ ಎಂದು ಕಾರ್ಯಕರ್ತರಿಗೆ ಗೌಡರು ಮನವಿ ಮಾಡಿದ್ದರು.