alex Certify ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮ್ಯಾನೇಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮ್ಯಾನೇಜರ್

ಬೆಂಗಳೂರು: ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನಲ್ಲಿ ನಡೆದಿದೆ.

30 ವರ್ಷದ ಪಾಂಡಿ ಪ್ರಭು ಮೃತ ನೌಕರ. ಮಾಜಿ ಕಾರ್ಪೊರೇಟರ್ ಧನರಾಜ್ ಅವರ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರಭು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಗಂಡನ ಸೇರುವ ತವಕದಲ್ಲಿದ್ದ ಮಹಿಳೆ ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ, ವಿಡಿಯೋ ಮಾಡಿ ಕಿರುಕುಳ

ಪ್ರಭು ರಾತ್ರಿ ಕಚೇರಿಯಲ್ಲಿಯೇ ಇಬ್ಬರು ಯುವಕರ ಜೊತೆ ಮಲಗಿದ್ದ. ಆದರೆ ಬೆಳಗಾಗುವಷ್ಟರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪ್ರಭು ಶವ ಪತ್ತೆಯಾಗಿದೆ. ಧನರಾಜ್ ಕಡೆಯವರೇ ಪ್ರಭುನನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾಗಿ ಪ್ರಭು ಸಹೋದರಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...