alex Certify ಮಹಿಳಾ ಅಭ್ಯರ್ಥಿ ಚುನಾವಣಾ ಕರಪತ್ರ ನೋಡಿದ ಮತದಾರರು ಕಂಗಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಅಭ್ಯರ್ಥಿ ಚುನಾವಣಾ ಕರಪತ್ರ ನೋಡಿದ ಮತದಾರರು ಕಂಗಾಲು…!

ಲೋಕಸಭೆಯಿಂದ ಹಿಡಿದು ಗ್ರಾಮಪಂಚಾಯಿತಿವರೆಗಿನ ಚುನಾವಣೆಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು ತಾವು ಗೆದ್ದರೆ ಏನೇನು ಮಾಡುತ್ತೇವೆ ಎಂಬುದರ ಭರವಸೆ ನೀಡುವ ಕರಪತ್ರವನ್ನು ಮತದಾರರಿಗೆ ಹಂಚುವುದನ್ನು ನೋಡಿದ್ದೇವೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಕಣಕ್ಕಿಳಿದಿರುವ ಮಹಿಳಾ ಅಭ್ಯರ್ಥಿಯೊಬ್ಬರು ಮತದಾರರಿಗೆ ವಿತರಿಸಿದ ಕರಪತ್ರ ಈಗ ವಿಶಿಷ್ಟ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ಹೆಬ್ಬೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಗಂಗಮ್ಮ ಎಂಬವರು ಮತದಾರರಿಗೆ ವಿತರಿಸಿರುವ ಕರಪತ್ರದಲ್ಲಿ ಗೆದ್ದರೆ ತಾವು ಮಾಡುವ ಕೆಲಸಗಳ ಜೊತೆಗೆ ಸೋತರೆ ಏನು ಮಾಡುತ್ತೇನೆ ಎಂಬುದನ್ನೂ ಸಹ ಇದರಲ್ಲಿ ವಿವರಿಸಿದ್ದಾರೆ. ಜೊತೆಗೆ ಈ ಕೆಲಸಗಳನ್ನು ಮಾಡಿಯೇ ತೀರುತ್ತೇನೆ ಎಂಬುದಕ್ಕೆ ಪುರಾವೆಯಾಗಿ ಸಾಕ್ಷಿಯೊಂದನ್ನು ಸಹ ನೀಡಿದ್ದಾರೆ.

‘ಪಾದರಕ್ಷೆಗಳು’ ಗುರುತನ್ನು ಪಡೆಯದಿರುವ ಗಂಗಮ್ಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾರೋ ಸೋಲುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಆದರೆ ಮತದಾರರಿಗೆ ಅವರು ವಿತರಿಸಿರುವ ಕರಪತ್ರ ಎಲ್ಲರ ಗಮನ ಸೆಳೆದಿರುವುದಂತೂ ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...