alex Certify ಮನೆ ಮಾರಾಟಕ್ಕಿಟ್ಟ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ರಾಗಿಣಿ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಾರಾಟಕ್ಕಿಟ್ಟ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ರಾಗಿಣಿ ತಾಯಿ

ಡ್ರಗ್ಸ್ ಹಗರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದು, ಇದರ ಮಧ್ಯೆ ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ ತಮ್ಮ ಫ್ಲಾಟ್ ಮಾರಾಟಕ್ಕಿಟ್ಟಿರುವ ವಿಚಾರ ಅಚ್ಚರಿಗೆ ಕಾರಣವಾಗಿತ್ತು. ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ರಾಕೇಶ್ ದ್ವಿವೇದಿ ಮಗಳ ವಿಚಾರದಲ್ಲಿ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆಂದು ಹೇಳಲಾಗಿತ್ತು.

ಇದೀಗ ರಾಗಿಣಿ ಅವರ ತಾಯಿ ರೋಹಿಣಿ ದ್ವಿವೇದಿ, ತಾವು ಮನೆ ಮಾರಾಟಕ್ಕಿಟ್ಟಿರುವ ಹಿಂದಿನ ಕಾರಣವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದು, ತಮ್ಮ ಮಗಳನ್ನು ಗೌರವಯುತವಾಗಿ ಹೊರಗೆ ಕರೆ ತರಲು ಈ ತೀರ್ಮಾನ ಕೈಗೊಂಡಿದ್ದೇವೆ ಎಂದಿದ್ದಾರೆ. ಈ ಮೂಲಕ ಖ್ಯಾತ ವಕೀಲರನ್ನು ರಾಗಿಣಿ ಪರ ವಾದ ಮಂಡಿಸಲು ನೇಮಿಸುವ ಸೂಚನೆ ನೀಡಿದ್ದಾರೆ.

ರಾಗಿಣಿ ಪಾರ್ಟಿಯಲ್ಲಿ ಭಾಗವಹಿಸಿದ್ದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ ಅವರು, ನನ್ನ ಮಗಳು ಹೆಣ್ಣುಹುಲಿ. ಯಾವುದಕ್ಕೂ ಆಕೆ ಅಂಜುವುದಿಲ್ಲ. ಈ ಪ್ರಕರಣದಿಂದ ಖಂಡಿತವಾಗಿಯೂ ಹೊರಬರುತ್ತಾಳೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...