alex Certify ಮತದಾರರ ಪರಿಷ್ಕೃತ ಪಟ್ಟಿ ಪ್ರಕಟ: ತಿದ್ದುಪಡಿ ಮಾಡಲು ಬಯಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತದಾರರ ಪರಿಷ್ಕೃತ ಪಟ್ಟಿ ಪ್ರಕಟ: ತಿದ್ದುಪಡಿ ಮಾಡಲು ಬಯಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ರಾಜ್ಯ ಚುನಾವಣಾ ಆಯೋಗ ಮತದಾರರ ಪರಿಷ್ಕೃತ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಜನವರಿ 18ರಿಂದ ಬಿಬಿಎಂಪಿ, ಕಂದಾಯ ಅಧಿಕಾರಿಗಳ ಕಚೇರಿ, ಎಲ್ಲಾ ತಾಲೂಕು, ಜಿಲ್ಲೆ ಕಚೇರಿಗಳು ಮತ್ತು ಎಲ್ಲ ಮತಗಟ್ಟೆಗಳಲ್ಲಿ ಇದನ್ನು ಪ್ರಕಟಿಸಲಾಗಿದೆ.

ವಿಶೇಷ ಸಮಗ್ರ ಪರಿಷ್ಕರಣೆಯ ಬಳಿಕ ಅಂತಿಮ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇದು ಮತದಾರರ ವೀಕ್ಷಣೆಗೆ ಲಭ್ಯವಾಗಿದೆ.

ಈ ಪಟ್ಟಿಯಲ್ಲಿ ಹೆಸರು, ಜನ್ಮ ದಿನಾಂಕ, ತಂದೆ ಹೆಸರು, ವಿಳಾಸ, ಭಾವಚಿತ್ರ ಸೇರಿದಂತೆ ಇತರೆ ತಿದ್ದುಪಡಿಯನ್ನು ಮಾಡಲು ಬಯಸುವವರು ನಮೂನೆ 8 ನ್ನು ಅವಶ್ಯಕ ದಾಖಲೆಗಳೊಂದಿಗೆ ನೋಂದಣಾಧಿಕಾರಿಗಳಿಗೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಅಲ್ಲದೆ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕವೂ ಸಲ್ಲಿಸಬಹುದಾಗಿದ್ದು, ಇದಕ್ಕಾಗಿ www.nvsp.in ವೆಬ್ ತಾಣಕ್ಕೆ ಭೇಟಿ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...