alex Certify ಮಗಳಿಗೆ ಮಕ್ಕಳಾಗಿಲ್ಲವೆಂದು ಈ ತಂದೆ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಗೆ ಮಕ್ಕಳಾಗಿಲ್ಲವೆಂದು ಈ ತಂದೆ ಮಾಡಿದ್ದೇನು ಗೊತ್ತಾ…?

ಮೈಸೂರು: ಮಗಳಿಗೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳಾಗಿಲ್ಲವೆಂದು ತಂದೆಯೊಬ್ಬ ಮಕ್ಕಳ ಕಳ್ಳನಾಗಿರುವ ವಿಚಿತ್ರ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

ನಾಲ್ಕು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದಿದ್ದ ಮಗು ಅಪಹರಣ ಪ್ರಕರಣ ಭೇದಿಸಿದ ಪೊಲೀಸರೇ ಈ ವಿಷಯ ತಿಳಿದು ಶಾಕ್ ಆಗಿದ್ದಾರೆ. ಮಗುವೊಂದನ್ನು ತಂದು ಪೋಷಿಸಿದರೆ ತನ್ನ ಮಗಳಿಗೆ ಮಕ್ಕಳಾಗುತ್ತೆ ಎಂದು ಯಾರೋ ಹೇಳಿದ್ದ ಮಾತು ಕೇಳಿ ಗಂಗರಾಜು ಎಂಬಾತ ನಂಜನಗೂಡಿನ ಪಾರ್ವತಿ ಎಂಬ ಮಹಿಳೆಯ ಮೂರು ವರ್ಷದ ಮಗುವನ್ನು ಅಪಹರಿಸಿದ್ದಾನೆ.

ಮಗು ಅಪಹರಣ ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಇದೀಗ ಆರೋಪಿ ಗಂಗರಾಜು ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಆರೋಪಿ ಈ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಹಲವು ವರ್ಷಗಳಿಂದ ನನ್ನ ಮಗಳಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮಗುವನ್ನು ಅಪಹರಿಸಿ ಆಕೆಗೆ ನೀಡಲು ಮುಂದಾಗಿದ್ದೆ. ಒಂದು ಮಗುವನ್ನು ಪಡೆದು ಬೆಳೆಸಿದರೆ ಆಕೆಗೆ ಸಂತಾನವಾಗುತ್ತೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...