alex Certify ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ಬೃಹತ್ ಬೇಟೆ: 1,350 ಕೆ.ಜಿ ಗಾಂಜಾ ವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ಬೃಹತ್ ಬೇಟೆ: 1,350 ಕೆ.ಜಿ ಗಾಂಜಾ ವಶ

ಬೆಂಗಳೂರು: ರಾಜ್ಯದಲ್ಲಿನ ಡ್ರಗ್ಸ್ ಮಾಫಿಯಾ, ಗಾಂಜಾ ಜಾಲಗಳ ಮೇಲೆ ತನಿಖೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು ಇದೀಗ ಮತ್ತೊಂದು ಬೃಹತ್ ಬೇಟೆಯಾಡಿದ್ದು, ಕಲಬುರಗಿಯಲ್ಲಿ 1,350 ಕೆ.ಜಿ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಶೆಷಾದ್ರಿಪುರಂ ಪೊಲೀಸರು, ಕಲಬುರಗಿಯ ಕಮಲಾಪುರಂನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಅಂಡರ್ ಗ್ರೌಂಡ್ ನಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 1,350 ಕೆ.ಜಿ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಒಡಿಶಾದಿಂದ ಲಾರಿ ಮೂಲಕ ರಾಜ್ಯಕ್ಕೆ ತಂದು ಈ ಗಾಂಜಾ ಮಾರಾಟ ಮಾಡಲಾಗುತ್ತಿತ್ತು. ಲಾರಿಯನ್ನು ಸೀಜ್ ಮಾಡಿರುವ ಪೊಲೀಸರು, ಪ್ರಕರಣ ಸಂಬಂಧ ಜ್ಞಾನಶೇಖರ್, ಸಿದ್ಧನಾಥ, ನಾಗಾನಾಥ, ಚಂದ್ರಕಾಂತ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಇದು ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ಬೃಹತ್ ಬೇಟೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...