alex Certify ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಶೂನ್ಯ ಬಡ್ಡಿಯಲ್ಲಿ ಕಿರು ಸಾಲ ಯೋಜನೆಗೆ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಶೂನ್ಯ ಬಡ್ಡಿಯಲ್ಲಿ ಕಿರು ಸಾಲ ಯೋಜನೆಗೆ ಚಾಲನೆ

ಕೊರೊನಾದಿಂದಾಗಿ ಕಂಗೆಟ್ಟಿದ್ದ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲು ಸರ್ಕಾರ ಮುಂದಾಗಿದೆ. ಬಡವರ ಬಂಧು ಯೋಜನೆ ಹೆಸರಿನಲ್ಲಿ ಇವರಿಗೆ ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದೆ ಬಂದಿದ್ದು, ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ತಳ್ಳುಬಂಡಿ ಇಟ್ಟುಕೊಂಡು ತರಕಾರಿ, ಹೂ, ಕಾಯಿ ಮಾರಾಟ ಮಾಡುವವರು, ಆಟೊಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಪದಾರ್ಥಗಳನ್ನು ಮಾರಾಟ ಮಾಡುವವರು ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯಡಿ ಸಾಲ ಪಡೆಯಬಹುದು. ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಇನ್ನು ಇವರಿಗೆ 3 ಸಾವಿರದಿಂದ 10 ಸಾವಿರ ರೂಪಾಯಿಯವರೆಗೆ ಸಾಲ ನೀಡಲಾಗುತ್ತದೆ. ಈ ಸಣ್ಣ ವ್ಯಾಪಾರಿಗಳು ಡಿಸಿಸಿ ಬ್ಯಾಂಕ್‌ಗಳು, ಮಹಿಳಾ ಸಹಕಾರಿ ಬ್ಯಾಂಕ್‌ಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದು. ಸಹಕಾರಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆದು ಈ ಬ್ಯಾಂಕ್‌ಗಳು ನಿಗಧಿಪಡಿಸಿರುವ ಅರ್ಜಿಯನ್ನು ತುಂಬಿ ಕೇಳುವ ದಾಖಲಾತಿಗಳೊಂದಿಗೆ ನೀಡಬೇಕು. ಸಾಲ ಪಡೆದ ಆರು ತಿಂಗಳವರೆಗೆ ಮರುಪಾವತಿಗೆ ಸಮಯ ಇದೆ. ಇನ್ನು ಯಾವುದೇ ಬಡ್ಡಿ ಕಟ್ಟುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...