ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅಧಿಕಾರಿ ಮೇ 29ರಂದು ಸೋಂಕಿಗೊಳಗಾಗಿದ್ದ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವ್ರ ಸಂಪರ್ಕಕ್ಕೆ ಬಂದಿದ್ದರು.
ಹಡ್ಸನ್ ವೃತ್ತದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಇವರು ಕೆಲಸ ಮಾಡ್ತಿದ್ದರು. ಕೆಎಎಸ್ ಅಧಿಕಾರಿಯಾಗಿರುವ ಸೋಂಕಿತರು ಶಿಕ್ಷಣ ವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡ್ತಿದ್ದರು. ಕಚೇರಿಯ ಆವರಣ, ನೆಲ ಮಹಡಿ, ಮೊದಲನೇ ಮಹಡಿಯನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ.
ಇಲಾಖೆಯಲ್ಲಿ ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ಅನೇಕ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಗೆ ಇದ್ರಿಂದ ಭಯ ಶುರುವಾಗಿದೆ. ಪಾದರಾಯನಪುರದಲ್ಲಿ 67 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸದ್ಯ 25 ಸಕ್ರಿಯ ಪ್ರಕರಣವಿದೆ.