alex Certify ʼಬೃಂದಾವನʼದಲ್ಲಿ ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೃಂದಾವನʼದಲ್ಲಿ ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ

ಭಾನುವಾರದಂದು ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸಹೋದರ ಧ್ರುವ ಸರ್ಜಾ ಅವರ ಫಾರಂ ಹೌಸ್ ನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನಡೆದಿದೆ.‌

ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದು, ಚಿರಂಜೀವಿ ಸರ್ಜಾ ಅವರಿಗೆ ಅಂತಿಮ ವಿದಾಯ ಹೇಳಿದ್ದಾರೆ. ಚಿರಂಜೀವಿ ಸರ್ಜಾ ಅವರ ತಂದೆ ವಿಜಯಕುಮಾರ್ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದವರೆಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದು, ಕೇವಲ 39ನೇ ವಯಸ್ಸಿನಲ್ಲಿ ಬಾಳ ಪಯಣಕೆ ವಿದಾಯ ಹೇಳಿದ ಚಿರಂಜೀವಿ ಸರ್ಜಾ ಅವರಿಗೆ ಕಂಬನಿ ಮಿಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...