alex Certify ಬಿಗ್‌ ನ್ಯೂಸ್:‌ ಮದ್ಯ ಪ್ರಿಯರಿಗೆ ಶಾಕ್ -‌ ಅಬಕಾರಿ ಸುಂಕ ಶೇ.17 ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್:‌ ಮದ್ಯ ಪ್ರಿಯರಿಗೆ ಶಾಕ್ -‌ ಅಬಕಾರಿ ಸುಂಕ ಶೇ.17 ರಷ್ಟು ಹೆಚ್ಚಳ

ಕಳೆದ 40 ದಿನಗಳಿಂದ ಮದ್ಯದಂಗಡಿ ಬಂದ್‌ ಆಗಿದ್ದರಿಂದ ಮಂಕಾಗಿದ್ದ ಮದ್ಯ ಪ್ರಿಯರು ಸೋಮವಾರದಿಂದ ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಉತ್ಸಾಹದಿಂದ ಖರೀದಿಗೆ ಮುಗಿ ಬಿದ್ದಿದ್ದಾರೆ.

ಈ ಸಂತಸದ ನಡುವೆ ಸರ್ಕಾರ ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದ್ದು, ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.17 ರಷ್ಟು ಏರಿಕೆ ಮಾಡಲಾಗುತ್ತಿದೆ. ಇನ್ನು ಒಂದೆರೆಡು ದಿನಗಳಲ್ಲೇ ಈ ಕುರಿತ ಅಧಿಕೃತ ಆದೇಶ ಹೊರ ಬೀಳಲಿದೆ.

ಅಬಕಾರಿ ಸುಂಕ ಏರಿಕೆಯಿಂದಾಗಿ ಮದ್ಯದ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳುವುದು ಅನಿವಾರ್ಯವಾಗಿರುವ ಹಿನ್ನಲೆಯಲ್ಲಿ ಸುಂಕ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...