alex Certify ಬಹುದಿನಗಳ ಬಳಿಕ ಮತ್ತೆ ಸೀಲ್ ಡೌನ್ – ಕ್ವಾರಂಟೈನ್ ಶುರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುದಿನಗಳ ಬಳಿಕ ಮತ್ತೆ ಸೀಲ್ ಡೌನ್ – ಕ್ವಾರಂಟೈನ್ ಶುರು…!

ಮಾರಣಾಂತಿಕ ಕೊರೊನಾ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದೇಶದಾದ್ಯಂತ ಲಾಕ್‌ ಡೌನ್ ಜಾರಿಗೊಳಿಸಿದ್ದು, ಜೊತೆಗೆ ಕೊರೊನೊ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಅಲ್ಲದೆ ಶಂಕಿತ ಸೋಂಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿತ್ತು.

ಆದರೆ ಆ ಬಳಿಕ ಲಾಕ್ ಡೌನ್ ಹಂತಹಂತವಾಗಿ ಸಡಿಲಿಕೆಯಾಗಿದ್ದು, ಇದರ ಜೊತೆಗೆ ಸೀಲ್ ಡೌನ್, ಕ್ವಾರಂಟೈನ್ ನಿಯಮಗಳನ್ನು ಸಹ ಸಡಿಲಿಕೆ ಮಾಡಲಾಗಿತ್ತು. ಹೀಗಾಗಿ ಸಾರ್ವಜನಿಕರು ಈ ಪದಗಳ ಬಳಕೆಯನ್ನೇ ಮರೆತುಬಿಟ್ಟಿದ್ದರು.

ಇದೀಗ ರಾಜ್ಯಕ್ಕೆ ಕೊರೊನಾ ರೂಪಾಂತರ ಬ್ರಿಟನ್ ವೈರಸ್ ಕಾಲಿಟ್ಟಿದ್ದು, ಇದು ಹಿಂದಿನ ವೈರಸ್ ಗಿಂತ ಶೇಕಡ 70ರಷ್ಟು ವೇಗದಲ್ಲಿ ಹರಡುತ್ತದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಸೀಲ್ ಡೌನ್, ಕ್ವಾರಂಟೈನ್ ಪದಗಳು ಚಾಲ್ತಿಗೆ ಬಂದಿವೆ.

ಬೆಂಗಳೂರಿನ ವಸಂತಪುರ ವಾರ್ಡ್ನ ವಿಠ್ಠಲ ನಗರದಲ್ಲಿನ ಅಪಾರ್ಟ್ಮೆಂಟ್ ನಿವಾಸಿ ಮಹಿಳೆ ಮತ್ತು ಅವರ ಮಗುವಿಗೆ ಬ್ರಿಟನ್ ವೈರಸ್ ತಗುಲಿದೆ ಎನ್ನಲಾಗಿದ್ದು, ಹೀಗಾಗಿ ಅವರಿದ್ದ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲಾಗಿದೆ. ಬ್ರಿಟನ್ ನಿಂದ ತಾಯಿ – ಮಗು ಬೆಂಗಳೂರಿಗೆ ಬಂದಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...