alex Certify ಬಡ – ಮಧ್ಯಮ ವರ್ಗದವರಿಗೆ ಭರವಸೆ ಮೂಡಿಸಿದೆ ಡಾ. ರಾಜು ಅವರ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ – ಮಧ್ಯಮ ವರ್ಗದವರಿಗೆ ಭರವಸೆ ಮೂಡಿಸಿದೆ ಡಾ. ರಾಜು ಅವರ ಈ ವಿಡಿಯೋ

ಕೊರೊನಾ ಕುರಿತು ಜನ ಸಾಮಾನ್ಯರಲ್ಲಿ ಭಯ ಹುಟ್ಟಿಸಿದ್ದೇ ಜಾಸ್ತಿ. ಹೀಗಾಗಿ ಕೊರೊನಾ ಬಂದರೆ ಬದುಕುವುದೇ ಇಲ್ಲವೇನೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಶ್ರೀಮಂತರು ತಮ್ಮ ಹಣ ಬಲದಿಂದ ಉತ್ತಮ ಚಿಕಿತ್ಸೆ ಪಡೆದುಕೊಳ್ಳುವ ಶಕ್ತಿ ಹೊಂದಿದ್ದರೆ ಮಧ್ಯಮ ಹಾಗೂ ಬಡ ವರ್ಗದ ಜನತೆ ಕಂಗಾಲಾಗಿರುತ್ತಿದ್ದರು.

ಇಂತಹ ಸಂದರ್ಭದಲ್ಲಿ ಕಂಗಾಲಾದ ವರ್ಗದ ಜನತೆಗೆ ಆಶಾಕಿರಣವಾಗಿದ್ದು ಡಾ. ರಾಜು. ತಮ್ಮ ವಿಡಿಯೋಗಳ ಮೂಲಕ ಕೊರೊನಾ ಎಂಬ ಈ ಮಾರಿಯನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹಣ ಸುಲಿಗೆ ಮಾಡಲು ಯಾವ್ಯಾವ ಮಾರ್ಗ ಅನುಸರಿಸಲಾಗುತ್ತಿದೆ ಎಂಬುದನ್ನು ಹಲವು ವಿಡಿಯೋಗಳಲ್ಲಿ ವಿವರಿಸಿದ್ದರು.

ಸ್ವತಃ ವೈದ್ಯರಾದರೂ, ಧನದಾಹಿ ವೈದ್ಯರ ನಿರ್ಲಜ್ಯ ನಡುವಳಿಕೆಯನ್ನು ಖಂಡಿಸಲು ಡಾ. ರಾಜು ಹಿಂದೇಟು ಹಾಕಿರಲಿಲ್ಲ. ಈಗ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ಅಸಹಾಯಕ ಬಡ ಆಟೋ ಚಾಲಕನೊಬ್ಬ ಸಕಾಲಕ್ಕೆ ಚಿಕಿತ್ಸೆ ಸಿಗದೆ ಹೇಗೆ ಸಾವಿಗೀಡಾದರು ಎಂಬುದನ್ನು ಡಾ. ರಾಜು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದು, ಇದು ಮನ ಕಲಕುವಂತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಪ್ರೀತಿಯಿಂದ ಸಾಕಿದ ತಂದೆಯ ಮುಖವನ್ನೂ ನೋಡಲು ಬಿಡದೆ ಅನಾಥರಂತೆ ಅವರ ಅಂತ್ಯಸಂಸ್ಕಾರ ಮಾಡಿದ ಕುರಿತು ಈ ಆಟೋ ಚಾಲಕನ ಮಕ್ಕಳು ಹೇಳಿದ ಘಟನೆಯನ್ನು ಹಂಚಿಕೊಂಡಿರುವ ಡಾ. ರಾಜು, ಇಂತಹ ಘಟನೆಗಳು ಮತ್ತೊಮ್ಮೆ ನಡೆಯಬಾರದೆಂದು ಹೇಳಿದ್ದಾರಲ್ಲದೇ ಒಂದೊಮ್ಮೆ ಯಾರಾದರೂ ಕೊರೊನಾದಿಂದ ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕೆ ಯಾರೂ ಮುಂದೆ ಬಾರದಿದ್ದಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿ ಪಿಪಿಇ ಕಿಟ್‌ ಧರಿಸದೆ ಆಗಮಿಸಿ ಮುಂದಿನ ಕಾರ್ಯಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಆ ಮೂಲಕ ಕೊರೊನಾದಿಂದ ಮೃತಪಟ್ಟವರಿಗೆ ಒಂದು ಗೌರವವಯುತ ಅಂತಿಮ ವಿದಾಯ ಸಿಗಬೇಕು. ಜನರಲ್ಲಿ ಭಯ ಹುಟ್ಟಿಸುವ ಕೆಲಸ ಯಾರೂ ಮಾಡಬಾರದೆಂಬ ಸಂದೇಶ ಸಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...