alex Certify ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಶಾಸಕರು ಬಿಜೆಪಿ ಸೇರಿದ್ದರೆ 9 ಕೋಟಿ ಸಾಲ ಯಾಕೆ…? ಸಿದ್ದರಾಮಯ್ಯ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಶಾಸಕರು ಬಿಜೆಪಿ ಸೇರಿದ್ದರೆ 9 ಕೋಟಿ ಸಾಲ ಯಾಕೆ…? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಬಿಜೆಪಿ ಭ್ರಷ್ಟಾಚಾರದ ಆಡಳಿತದ ವಿರುದ್ಧ ಮತ್ತೆ ಗುಡುಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆಯುವುದು ಪ್ರತಿಯೊಬ್ಬ ಶಾಸಕನ ಹಕ್ಕಾಗಿರುವಾಗ ಬ್ಲಾಕ್‌ಮೇಲ್ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಚಾಟಿ ಬೀಸಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಸರ್ಕಾರವೇ ಜೀವಂತವಾಗಿಲ್ಲ ಎಂದ ಮೇಲೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದರಿಂದ ಜನರ ಮೇಲೆ ಯಾವ ಪರಿಣಾಮ ಬೀರಲು ಸಾಧ್ಯ? ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ಹೀಗಿರುವಾಗ ಅಭಿವೃದ್ಧಿ ಕೆಲಸಗಳು ನಡೆಯುವುದು ದೂರದ ಮಾತು ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಶಾಸಕರು ಬಿಜೆಪಿ ಸೇರಿದ್ದರೆ ಯೋಗೀಶ್ವರ್ 9 ಕೋಟಿ ರೂಪಾಯಿ ಸಾಲ ಮಾಡುವ ಅಗತ್ಯವೇನಿತ್ತು? ಈ ಆರೋಪವನ್ನು ನಾವು ಮಾಡಿದ್ದರೆ ವಿರೋಧಪಕ್ಷಗಳು ಸುಳ್ಳು ಹೇಳುತ್ತಿವೆ ಎಂದು ನಿರಾಕರಿಸಬಹುದಿತ್ತು. ಅವರದ್ದೇ ಪಕ್ಷದ ಸಚಿವರು ಹೇಳಿದ್ದಾರಲ್ಲಾ. ಇದಕ್ಕೆ ಏನನ್ನುತ್ತಾರೆ? ಆಪರೇಷನ್ ಕಮಲಕ್ಕಾಗಿ ಯೋಗೀಶ್ವರ್ ಕೋಟ್ಯಂತರ ರೂಪಾಯಿ ಸಾಲ ಮಾಡಿದ್ದಾರೆ ಎಂದು ಸಚಿವರೇ ಹೇಳುವ ಮೂಲಕ ನಮ್ಮ ಆರೋಪಕ್ಕೆ ಪುರಾವೆ ಒದಗಿಸಿದ್ದಾರೆ. ಹೀಗಾಗಿ ಆಪರೇಷನ್ ಕಮಲದ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...