alex Certify ನಾಳೆಯಿಂದ ಸಂಚರಿಸಲಿರುವ ವಿಶೇಷ ರೈಲಿನಲ್ಲಿ ಪ್ರಯಾಣಿಸುವವರ ಗಮನದಲ್ಲಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಸಂಚರಿಸಲಿರುವ ವಿಶೇಷ ರೈಲಿನಲ್ಲಿ ಪ್ರಯಾಣಿಸುವವರ ಗಮನದಲ್ಲಿರಲಿ ಈ ವಿಷಯ

ನಾಲ್ಕನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಲಾಗಿದ್ದು ಬಸ್ ಸಂಚಾರ ಆರಂಭವಾಗಿದೆ. ಇದೀಗ ರಾಜ್ಯದಲ್ಲಿ ನಾಳೆಯಿಂದ ಎರಡು ವಿಶೇಷ ಎಕ್ಸ್ಪ್ರೆಸ್ ರೈಲುಗಳು ಸಂಚಾರ ಆರಂಭಿಸಲಿವೆ.

ಬೆಂಗಳೂರು – ಮೈಸೂರು ಹಾಗೂ ಬೆಂಗಳೂರು – ಬೆಳಗಾವಿ ನಡುವೆ ಈ ರೈಲುಗಳು ಸಂಚರಿಸಲಿದ್ದು, ಇದರಲ್ಲಿ ಪ್ರಯಾಣಿಸಲು ಪ್ರಯಾಣಿಕರು ಕಡ್ಡಾಯವಾಗಿ ಆನ್ಲೈನ್ ನಲ್ಲೇ ಟಿಕೆಟ್ ಬುಕ್ ಮಾಡಬೇಕಿದೆ.

ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ನಾಳೆಯಿಂದ ಈ ರೈಲುಗಳು ಪ್ರಾಯೋಗಿಕ ಸಂಚಾರ ಆರಂಭಿಸಲಿದ್ದು, ಬೆಂಗಳೂರಿನಿಂದ ಬೆಳಿಗ್ಗೆ 9-20 ಕ್ಕೆ ಹೊರಟು ಮಧ್ಯಾಹ್ನ 12-45 ಕ್ಕೆ ಮೈಸೂರು ತಲುಪಲಿದೆ.

ಬೆಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು ಸಂಜೆ 6-30 ಕ್ಕೆ ಬೆಳಗಾವಿ ತಲುಪಲಿದೆ. ಹಾಗೆಯೇ ಬೆಳಗಾವಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು ಸಂಜೆ 6.30 ಕ್ಕೆ ಬೆಂಗಳೂರು ತಲುಪಲಿದೆ. ಆನ್ಲೈನ್ ಟಿಕೆಟ್ ಖಾತರಿಯಾದ ಬಳಿಕವೇ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಬರುವಂತೆ ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...