alex Certify ನಶೆ ರಾಣಿ ಸಂಜನಾ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಶೆ ರಾಣಿ ಸಂಜನಾ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾಣಿಗೂ ಡ್ರಗ್ಸ್ ಪೆಡ್ಲರ್ ಗಳ ಜತೆ ಲಿಂಕಿತ್ತು ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಈ ವರೆಗೂ ಸಂಜನಾ ಹೊರತುಪಡಿಸಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉಳಿದೆಲ್ಲ ಆರೋಪಿಗಳಿಗೂ ಪರಸ್ಪರ ಪರಿಚಯವಿತ್ತು ಎಂಬ ಮಾಹಿತಿ ಈಗಾಗಲೇ ಸಿಸಿಬಿಗೆ ಲಭ್ಯವಾಗಿತ್ತು. ಅದರಲ್ಲೂ ನಟಿ ರಾಗಿಣಿ ಹಾಗೂ ರವಿಶಂಕರ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಈಗ ಸಂಜನಾ ಹಾಗೂ ಡ್ರಗ್ಸ್ ಪೆಡ್ಲರ್ ಗೂ ಲಿಂಕಿದೆ ಎಂಬುದು ತಿಳಿದುಬಂದಿದೆ.

ಡ್ರಗ್ಸ್ ಪ್ರಕರಣದ 5ನೇ ಆರೋಪಿ ವೈಭವ್ ಜೈನ್ ಜತೆ ಸಂಜನಾಗೆ ಲಿಂಕಿದ್ದು, ಫೆ.14, 2018ರಲ್ಲಿ ನಡೆದಿದ್ದ ಜೆಡಬ್ಲ್ಯೂ ಮ್ಯಾರಿಯೇಟ್ ನಲ್ಲಿ ನಡೆದಿದ್ದ ಫ್ಯಾಷನ್ ಶೋನಲ್ಲಿ ಸಂಜನಾ ಹಾಗೂ ವೈಭವ್ ಭಾಗಿಯಾಗಿದ್ದರು. ಅಲ್ಲದೇ ಸಂಜನಾ ಭಾಗವಹಿಸುತ್ತಿದ್ದ ಹಲವು ಪಾರ್ಟಿಗಳಲ್ಲೂ ವೈಭವ್ ಹಾಗೂ ಇನ್ನಿತರ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಖಚಿತ ಮಾಹಿತಿಗಳು ಸಿಸಿಬಿಗೆ ಲಭ್ಯವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...