alex Certify ಡ್ರಗ್ಸ್ ಮಾಫಿಯಾ ಜೊತೆ ನಂಟಿದ್ದರೆ ನನಗೆ ಗಲ್ಲು ಶಿಕ್ಷೆಯಾಗಲಿ ಎಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಮಾಫಿಯಾ ಜೊತೆ ನಂಟಿದ್ದರೆ ನನಗೆ ಗಲ್ಲು ಶಿಕ್ಷೆಯಾಗಲಿ ಎಂದ ಶಾಸಕ

ಬೆಂಗಳೂರು: ಶ್ರೀಲಂಕಾದ ಕೊಲಂಬೊಗೆ ಹೋಗಿದ್ದು ನಿಜ. ಆದರೆ ಡ್ರಗ್ಸ್ ಮಾಫಿಯಾದಲ್ಲಿ ನನಗೆ ನಂಟಿದೆ ಎಂಬುದು ಸುಳ್ಳು. ಡ್ರಗ್ಸ್ ಮಾಫಿಯಾ ಜತೆ ನನಗೆ ನಂಟಿದ್ದರೆ ನನಗೆ ಗಲ್ಲುಶಿಕ್ಷೆ ನೀಡಲಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ವಿಕ್ರಂ ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ನನಗೆ ನಂಟಿದ್ದರೆ ನನಗೆ ಗಲ್ಲು ಶಿಕ್ಷೆ ಕೊಡಲಿ. ಜನನಾಯಕನಾಗಿ ಆಯ್ಕೆಯಾದವರು ಇಂತಹ ಹಲ್ಕಾ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದಾದರೆ ಅವರಿಗೆ ಗಲ್ಲುಶಿಕ್ಷೆಯಾಗಬೇಕು ಈ ಬಗ್ಗೆ ನಾನೇ ಆಗ್ರಹಿಸುತ್ತೇನೆ ಎಂದರು.

ಇನ್ನು ನಾನು ಕೊಲಂಬೊಗೆ ಹೋಗಿದ್ದು ನಿಜ. ಆದರೆ ಪ್ರಶಾಂತ್ ಸಂಬರಗಿ ಮಾಡಿದ ಆರೋಪದಂತೆ ನಾನು ಸಂಜನಾ ಜತೆ ಕೊಲಂಬೊಗೆ ಹೋಗಿಲ್ಲ. ಇದು ನನ್ನ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪ ಎಂದು ಹೇಳಿದರು.

ಕೊಲಂಬೊಗೆ ಹೋಗುವುದು ತಪ್ಪಾ? ಕ್ಯಾಸಿನೋ ಕಾನೂನು ಬಾಹೀರವೇನೂ ಅಲ್ಲ. ಕೊಲಂಬೊಗೆ ಹೋಗುವುದನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ಯಾ…? ಕೊಲಂಬೊಗೆ ಹೋಗುವುದರಲ್ಲಿ ತಪ್ಪೇನಿದೆ? ನಾನು ಜೆಡಿಎಸ್ ನಲ್ಲಿದ್ದಾಗ ಕೂಡ ಕೊಲಂಬೊಗೆ ಹೋಗಿದ್ದೇನೆ. ಕುಮಾರಸ್ವಾಮಿಯವರ ಜತೆ ಕೂಡ ನಾನು ಕೊಲಂಬೊಗೆ ಹೋಗಿದ್ದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...