alex Certify ‘ಡ್ರಗ್ಸ್ ಜಾಲದಲ್ಲಿ ಈ ನಟ-ನಟಿಯ ವಿಚಾರಣೆ ಏಳೇಳು ಜನುಮದ ವಿಪರ್ಯಾಸ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡ್ರಗ್ಸ್ ಜಾಲದಲ್ಲಿ ಈ ನಟ-ನಟಿಯ ವಿಚಾರಣೆ ಏಳೇಳು ಜನುಮದ ವಿಪರ್ಯಾಸ’

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟ ಸಂತೋಷ್ ಆರ್ಯನ್ ಹಾಗೂ ನಟಿ ಐಂದ್ರಿತಾ ರೇ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕುಹಕವಾಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಂಬರಗಿ, ನೂರು ಜನ್ಮಕು ಚಿತ್ರದ ನಾಯಕ ಹಾಗೂ ನಾಯಕಿ ಇಬ್ಬರೂ ಡ್ರಗ್ಸ್ ಜಾಲದಲ್ಲಿ ಆರೋಪ ಎದುರಿಸುತ್ತಿರುವುದು ಏಳೇಳು ಜನುಮದ ವಿಪರ್ಯಾಸ ಎಂದು ಕುಟುಕಿದ್ದಾರೆ.

ಅಲ್ಲದೇ ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವರೆ… ಎಂಬ ಸಾಲುಗಳನ್ನು ಬರೆಯುವ ಮೂಲಕ ವ್ಯಂಗ್ಯವಾಡಿದ್ದಾರೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಬರಗಿ, ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಇಬ್ಬರು ಸ್ಟಾರ್ ನಟರ ಹೆಸರನ್ನು ಇನ್ನೆರಡು ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ. ನಾನು ಹೇಳುವ ಹೆಸರು ವಿಧಾನಸೌಧದ ಪಡಸಾಲೆಯಲ್ಲಿ ಸದ್ದು ಮಾಡುತ್ತೆ. ದಾಖಲೆ ಸಮೇತ ಹೆಸರು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...