ಬೆಂಗಳೂರು: ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಜನರು ಪ್ರತಿದಿನ ಭಯದಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಕೊರೊನಾ ಕುರಿತು ಜನರಿಗಿದ್ದ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಡಾ. ರಾಜು ಅವರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಹೊಸ ಹೊಸ ವಿಡಿಯೋ ಮೂಲಕ ಕೊರೊನಾ ಬಗ್ಗೆ ಜನರು ಅನಗತ್ಯ ಆತಂಕ ಪಡಬೇಕಿಲ್ಲ ಎಂದು ಅರಿವು ಮೂಡಿಸುತ್ತಿದ್ದಾರೆ.
ಇದೀಗ ಜನರಿಗೆ ಧೈರ್ಯ ತುಂಬುವ ಭಾಗವಾಗಿ ಹೊಸ ವಿಡಿಯೋ ಬಿಡುಗಡೆ ಮಾಡಿರುವ ಡಾ.ರಾಜು ಅವರು, ಜ್ವರ ಬಂದರೆ ಜನರು ಭಯ ಪಡಬೇಕಿಲ್ಲ, ಬದಲಾಗಿ ಖುಷಿ ಪಡಿ ಎಂದು ಹೇಳಿದ್ದಾರೆ. ಕೊರೊನಾದಂತಹ ಸಂದರ್ಭದಲ್ಲಿ ಜ್ವರ ಬಂದರೆ ಖುಷಿ ಪಡಬೇಕು ಎಂದು ಹೇಳಲು ಕಾರಣವೇನು…? ಎಂಬುದರ ಕುರಿತು ಈ ವಿಡಿಯೋದಲ್ಲಿ ಸ್ವತಃ ಡಾ. ರಾಜು ಅವರೇ ವಿವರಿಸಿದ್ದಾರೆ.
https://www.facebook.com/106521611130177/videos/1303582999981418