ಕರ್ನಾಟಕ ಹಾಲು ಮಹಾಮಂಡಳಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ಭರ್ಜರಿ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ಪೌಷ್ಟಿಕಾಂಶವುಳ್ಳ ನಂದಿನಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಹೌದು, ಕೆಎಂಎಫ್ ಜಾರಿಗೆ ತಂದಿರುವ ಈ ಯೋಜನೆಯ ಪ್ರಕಾರ 85 ರೂ. ಮೌಲ್ಯದ 200 ಗ್ರಾಂ ನಂದಿನಿ ಪನೀರ್ ಖರೀದಿಸುವವರಿಗೆ 75 ರೂಪಾಯಿ ಬೆಲೆಯ 100ಗ್ರಾಂ ನಂದಿನಿ ಚೀಸ್ ಸ್ಲೈಸ್ ಅನ್ನು ಉಚಿತವಾಗಿ ನೀಡಲಿದ್ದು, ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ.
ಚೀಸ್ ನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವ ಮತ್ತು ಖನಿಜಗಳು ಹೆಚ್ಚಾಗಿರುವುದರಿಂದ ಸ್ನಾಯು ಮತ್ತು ಮೂಳೆಗಳು ಬಲಗೊಳ್ಳುತ್ತವಲ್ಲದೆ, ಪನೀರ್ ನಲ್ಲಿ ಪ್ರೊಟೀನ್ ಸಮೃದ್ಧವಾಗಿದ್ದು ಗ್ರಾಹಕರಿಗೆ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಕಾರಿ ಎಂದು ಹೇಳಲಾಗಿದೆ.