alex Certify ಕರ್ತವ್ಯ ಬಿಟ್ಟು, ಸಮವಸ್ತ್ರ ತೊಟ್ಟು ಮೋಜು-ಮಸ್ತಿ; ಕುಡಿದು ಬೈಕ್ ಸ್ಟಂಟ್ ಮಾಡಿದ ಸಿಬ್ಬಂದಿ ವಿರುದ್ಧ ಮೆಸ್ಕಾಂ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯ ಬಿಟ್ಟು, ಸಮವಸ್ತ್ರ ತೊಟ್ಟು ಮೋಜು-ಮಸ್ತಿ; ಕುಡಿದು ಬೈಕ್ ಸ್ಟಂಟ್ ಮಾಡಿದ ಸಿಬ್ಬಂದಿ ವಿರುದ್ಧ ಮೆಸ್ಕಾಂ ಕ್ರಮ

ಶಿವಮೊಗ್ಗ: ಕರ್ತವ್ಯ ಬಿಟ್ಟು ಕೆಲ ಮೆಸ್ಕಾಂ ಸಿಬ್ಬಂದಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಲ್ಲದೇ ಬೈಕ್ ಸ್ಟಂಟ್ ಮಾಡುವ ಮೂಲಕ ಬೇಜವಾಬ್ದಾರಿ ಮೆರೆದಿದ್ದಾರೆ. ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಇದೀಗ 6 ಮೆಸ್ಕಾಂ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.

ಅಂಜನಾಪುರ ಜಲಾಶಯದ ಬಳಿ 6 ಮೆಸ್ಕಾಂ ಸಿಬ್ಬಂದಿಗಳು ಕರ್ತವ್ಯ ಬಿಟ್ಟು ಮದ್ಯಪಾನ ಮಾಡಿ, ಕುಣಿದು ಕುಪ್ಪಳಿಸಿದ್ದಲ್ಲದೇ, ಬೈಕ್ ಸ್ಟಂಟ್ ಮಾಡುವ ಮೂಲಕ ಮೋಜಿನಲ್ಲಿ ತೊಡಗಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ 6 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಕಾರ್ಯಪಾಲಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳಾದ ಚಂದ್ರಶೇಖರ, ಎಸ್.ಎ.ರವಿ, ವಿನಯ್ ಕುಮಾರ್, ಸುರೇಶ್ ಎಲ್, ಮಂಜುನಾಥ್ ಕೆ.ಎಸ್, ಮಹೇಶ್ವರಪ್ಪ ಸಸ್ಪೆಂಡ್ ಆದ ಸಿಬ್ಬಂದಿಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...