alex Certify ಎಂಡಿಎಂಎ ಮಾದಕದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಡಿಎಂಎ ಮಾದಕದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮವೇನು ಗೊತ್ತಾ…?

ಸ್ಯಾಂಡಲ್ ವುಡ್ ನಲ್ಲೀಗ ಡ್ರಗ್ ಮಾಫಿಯಾದ್ದೇ ಸುದ್ದಿ. ಈಗ ಮಾಧ್ಯಮದಲ್ಲಿ ಎಲ್ಲೆಡೆ ಕಾಣಿಸುವ ಡ್ರಗ್ಸ್ ಹೆಸರು ಎಂಡಿಎಂಎ. ಇದರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಗೊತ್ತೇ….?

ಮೊದಲನೆಯದಾಗಿ ಇದು ಬಲು ದುಬಾರಿ. ಒಂದು ಎಂಡಿಎಂಎ ಮಾತ್ರೆಗೆ ಅದೆಷ್ಟೋ ಸಾವಿರ ತೆತ್ತು ಕೊಳ್ಳಬೇಕು. ತೆಗೆದುಕೊಂಡ ಕೆಲವು ಕ್ಷಣದಲ್ಲಿ ನಶೆ ಏರಿ ಮತ್ತೆ ಸ್ವಲ್ಪ ಹೊತ್ತಿನಲ್ಲೇ ನಿಮ್ಮನ್ನು ಸಹಜ ಸ್ಥಿತಿಗೆ ತರುತ್ತದೆ.

ನಿರಂತರವಾಗಿ ಇದನ್ನು ಸೇವಿಸುವುದರಿಂದ ದೃಷ್ಟಿಯ ಶಕ್ತಿ ಕಡಿಮೆಯಾಗುತ್ತದೆ. ವಾಂತಿ ವಾಕರಿಕೆಯ ಲಕ್ಷಣಗಳು ಕಂಡು ಬಂದಾವು. ಜೀರ್ಣ ವ್ಯವಸ್ಥೆ ಹಾಳಾಗಿ ಮಾನಸಿಕ ಸ್ಥಿತಿಯೂ ಕುಗ್ಗಬಹುದು.

ಇದರ ಸೇವನೆ ನೇರವಾಗಿ ಮೆದುಳಿನ ಮತ್ತು ನರ ಮಂಡಲದ ಮೇಲೆ ಪರಿಣಾಮ ಬೀರುತ್ತದೆ. ದೇಹ ವಿಪರೀತ ಬೆವರುವುದರಿಂದ ನಿರ್ಜಲೀಕರಣವೂ ಉಂಟಾದೀತು. ಮಿತಿಮೀರಿದರೆ ಪಾರ್ಶ್ವವಾಯುವಿನ ಲಕ್ಷಣಗಳು ಕಂಡು ಬರುತ್ತವೆ.

ಹೃದಯ ಬಡಿತದಲ್ಲಿ ಏರುಪೇರಾಗಿ ಹೃದಯಾಘಾತವಾಗುವ ಸಂಭವವೂ ಇದೆ. ನಿರಂತರ ಬಳಕೆಯಿಂದ ಲಿವರ್ ಮತ್ತು ಮೂತ್ರ ಪಿಂಡಗಳು ಹಾನಿಗೊಳಗಾಗುತ್ತವೆ. ಮಾನಸಿಕವಾಗಿ ಒಮ್ಮೆ ಆ ಮಾದಕ ದ್ರವ್ಯಕ್ಕೆ ಅಡಿಕ್ಟ್ ಅದರ ಮತ್ತೆ ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...