alex Certify ಉಪ ಚುನಾವಣೆಯಲ್ಲಿ ಅರಳಿದ ಕಮಲ; ಬಿಜೆಪಿ ಅಲೆಯೇ ಇಲ್ಲ ಎಂದ ಸಿದ್ದುಗೆ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಪ ಚುನಾವಣೆಯಲ್ಲಿ ಅರಳಿದ ಕಮಲ; ಬಿಜೆಪಿ ಅಲೆಯೇ ಇಲ್ಲ ಎಂದ ಸಿದ್ದುಗೆ ಟಾಂಗ್

ಬೆಂಗಳೂರು: ಉಪಚುನಾವಣೆಯಲ್ಲಿ ಆರ್.ಆರ್. ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಜಯಗಳಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲನುಭವಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದೆ.

ಸಿದ್ದರಾಮಯ್ಯನವರು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಅಲೆಯೇ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಗೆಲ್ಲಿಸುವ ಮೂಲಕ ಇಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ ಎಂದು ಮತದಾರರೇ ಉತ್ತರ ನೀಡಿದ್ದಾರೆ ಎಂದು ಟ್ವೀಟ್ ಮಾಡಿದೆ.

ಇದೇ ವೇಳೆ ಮಂಡ್ಯದ ಜೋಡೆತ್ತು, ಆರ್.ಆರ್. ನಗರದಲ್ಲಿ ಕಳ್ಳ ಎತ್ತುಗಳಾಗಿವೆ ಎಂದು ಹಲವರು ಟೀಕಿಸಿದ್ದಾರೆ. ಅಲ್ಲದೇ ಬೆಂಚಿನ ಮೇಲೆ ಕುಳಿತಿರುವ ಡಿ.ಕೆ. ಶಿವಕುಮಾರ್, ಅವರ ಕಾಲಿನ ಮೇಲೆ ಹೆಚ್.ಡಿ.ಕುಮಾರಸ್ವಾಮಿ ನಿದ್ರಿಸುತ್ತಿರುವ ವಿಡಂಬನಾತ್ಮಕ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಸಿದ್ದರಾಮಯ್ಯ ಭವಿಷ್ಯ ಎಂದೂ ನಿಜವಾಗಲ್ಲ, ಮೋದಿ ಪ್ರಧಾನಿಯಾಗಲ್ಲ ಎಂದರು ಆದರೆ ಪ್ರಧಾನಿಯಾದರು, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದರು ಪಕ್ಕದಲ್ಲೇ ನಿಂತು ಅವರನ್ನು ಸಿಎಂ ಮಾಡಿದರು. ಆರ್.ಆರ್. ನಗರದಲ್ಲಿ ಬಿಜೆಪಿ ಗೆಲ್ಲಲ್ಲ ಎಂದರು. ಇದೀಗ ಬಿಜೆಪಿ ಗೆದ್ದಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...