alex Certify ಆಸಿಡ್ ಕುಡಿದಂತೆ ಆಗುತ್ತಿದೆ; ಪ್ರಸಕ್ತ ಬೆಳವಣಿಗೆಗಳ ಕುರಿತು ಹಿರಿಯ ನಟ ಜಗ್ಗೇಶ್‌ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸಿಡ್ ಕುಡಿದಂತೆ ಆಗುತ್ತಿದೆ; ಪ್ರಸಕ್ತ ಬೆಳವಣಿಗೆಗಳ ಕುರಿತು ಹಿರಿಯ ನಟ ಜಗ್ಗೇಶ್‌ ಆಕ್ರೋಶ

ಬೆಂಗಳೂರು: ಇಂದಿನ ಗ್ರೇಟ್ ನಶೆ ತಲೆಮಾರು ನಮ್ಮ ಉದ್ಯಮ ಹರಾಜು ಹಾಕುವುದು ನೋಡಿ ಹೊಟ್ಟೆಗೆ ಆಸಿಡ್ ಕುಡಿದಂತೆ ಆಗಿದೆ ನಮ್ಮ ತಲೆಮಾರಿಗೆ ಎಂದು ನವರಸ ನಾಯಕ ಜಗ್ಗೇಶ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ನಟ ಜಗ್ಗೇಶ್, ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು. ತಿನ್ನಲು ಅನ್ನವಿಲ್ಲದಿದ್ದರೂ ಮುಖದಲ್ಲಿ ನಗು ಮಾಸುತ್ತಿರಲಿಲ್ಲ. ಗೆದ್ದಮೇಲೆ ಯಶಸ್ಸು ತಲೆಗೆ ಏರಲಿಲ್ಲ. ಸ್ವಾಭಿಮಾನಕ್ಕೆ ಪಡೆದದ್ದು ಏನು ಬೇಕಾದರು ಬಿಸಾಕಿ ಗೌರವದಿಂದ ಬದುಕಿದವರು..! ಬದುಕನ್ನ ಪ್ರೀತಿಸಿ ಬೆಳೆದವರು…! ಪ್ರೀತಿಗಾಗಿ ಬದುಕಿದ ತಲೆಮಾರು ನಮ್ಮದು ಹಾಗಾಗಿ ಸ್ವಲ್ಪಸಿಟ್ಟುಜಾಸ್ತಿ ಎಂದಿದ್ದಾರೆ.

ಇಂದು ನಶೆ ತಲೆಮಾರಿನವರು ನಮ್ಮ ಕನ್ನಡ ಚಿತ್ರರಂಗವನ್ನು ಹರಾಜು ಹಾಕುವುದನ್ನು ನೋಡಿ ಆಸಿಡ್ ಕುಡಿದಂತೆ ಸಂಕಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧ ಜಗ್ಗೇಶ್ ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...