alex Certify ಆಕ್ಸಿಜನ್ ಹಾಗೂ ರೆಮ್ ಡಿಸಿವಿರ್ ಬಳಕೆ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಡಾ. ರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕ್ಸಿಜನ್ ಹಾಗೂ ರೆಮ್ ಡಿಸಿವಿರ್ ಬಳಕೆ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಡಾ. ರಾಜು

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಹಾಗೂ ಸೋಂಕಿತರ ಜೀವರಕ್ಷಕ ಎಂದೇ ಕರೆಯಲಾಗುತ್ತಿರುವ ರೆಮ್ ಡಿಸಿವಿರ್ ಅಲಭ್ಯತೆಯಿಂದಲೇ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿಜಕ್ಕೂ ಸೋಂಕಿತರು ಆಕ್ಸಿಜನ್ ಇಲ್ಲದೇ ಸಾವನ್ನಪ್ಪುತ್ತಿದ್ದಾರೆಯೇ ? ರೆಮ್ ಡಿಸಿವಿರ್ ಇಂಜಕ್ಷನ್ ಜೀವರಕ್ಷಕವೇ? ನಿಜಕ್ಕೂ ಕೋವಿಡ್ ಎರಡನೇ ಅಲೆಯಲ್ಲಿ ನಡೆಯುತ್ತಿರುವುದಾದರೂ ಏನು ? ಎಂಬುದನ್ನು ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಸಾವನ್ನಪ್ಪುತ್ತಿಲ್ಲ. ಕೊರೊನಾ ಸೋಂಕು ನಮ್ಮ ದೇಹವನ್ನು ಹೊಕ್ಕಾಗ ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ವೈರಸ್ ನ್ನು ಕೊಲ್ಲಲು ಯತ್ನಿಸುತ್ತದೆ. ಆಂಟಿ ಬಾಡಿ ಹಾಗೂ ವೈರಸ್ ನಡುವಿನ ಈ ಹೋರಾಟದಲ್ಲಿ ಶ್ವಾಸಕೋಶಕ್ಕೆ ಗಾಯವಾಗುತ್ತದೆ. ಈ ಗಾಯ ಗುಣಮುಖವಾಗದಿದ್ದಾಗ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ಶ್ವಾಸಕೋಶದಲ್ಲಿನ ಗಾಯಕ್ಕೆ ಚಿಕಿತ್ಸೆ ನೀಡುವುದು ಮುಖ್ಯವಾಗುತ್ತದೆ ಹೊರತು ಆಕ್ಸಿಜನ್ ಪೂರೈಕೆ ಮಾಡುವುದಲ್ಲ. ಆಕ್ಸಿಜನ್ ಪೂರೈಕೆ ಮಾಡುವುದು ಸೋಂಕಿಗೆ ಪರಿಹಾರವಲ್ಲ ಎಂದು ಹೇಳಿದ್ದಾರೆ.

ಇನ್ನೊಂದು ಪ್ರಮುಖವಾದ ವಿಷಯವೆಂದರೆ ‘ರೆಮ್ ಡಿಸಿವಿರ್’ ಕೊರೊನಾ ಸೋಂಕಿತರಿಗೆ ಮಾರಕವಾಗುತ್ತೆ ಹೊರತು ಜೀವ ಉಳಿಸುವುದಿಲ್ಲ. ರೆಮ್ ಡಿಸಿವಿರ್ ಬದಲಾಗಿ ‘ಸ್ಟಿರಾಯ್ಡ್’ ಕೋವಿಡ್ ರೋಗಿಗಳಿಗೆ ಪರಿಣಾಮಕಾರಿಯಾಗಿದೆ. ಹೈ ಡೋಸೆಜ್ ಸ್ಟಿರಾಯ್ಡ್ ಸೋಂಕಿತರಿಗೆ ಜೀವರಕ್ಷಕವಾಗಿದ್ದು ಇದನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ.

ಕಲಬುರಗಿಯಲ್ಲಿ ಘೋರ ದುರಂತ: ಆಕ್ಸಿಜನ್ ಖಾಲಿಯಾಗಿ ನಾಲ್ವರು ಸಾವು

ಇದೇ ವೇಳೆ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿದಿನ ನೂರಾರು ಜನರಲ್ಲ, ಸಾವಿರಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆದರೆ ಸರ್ಕಾರ ತಪ್ಪು ಅಂಕಿ-ಅಂಶಗಳನ್ನು ನೀಡುತ್ತಿದೆ ಮಾತ್ರವಲ್ಲ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಸಾವನ್ನಪ್ಪಲು ಕಾರಣ ಸರ್ಕಾರದ ಪ್ರೋಟೊಕಾಲ್ ಎಂಬ ಕಹಿ ಸತ್ಯವನ್ನು ಡಾ. ರಾಜು ಬಹಿರಂಗಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಚಿಕಿತ್ಸೆಗಳಿಲ್ಲದೇ ಸಾವನ್ನಪ್ಪುತ್ತಿರುವವರಿಗಿಂತ ಮನೆ ಮನೆಗಳಲ್ಲಿ, ರಸ್ತೆಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹತ್ತುಪಟ್ಟು ಹೆಚ್ಚಿದೆ. ಜನರ ಜೀವದ ಜೊತೆ ಚೆಲ್ಲಾಟವಾಡುವ ಆಸ್ಪತ್ರೆಗಳು ಹಾಗೂ ಸರ್ಕಾರವೇ ಸಾವು ನೋವಿಗೆ ನೇರ ಹೊಣೆ ಎಂದು ಡಾ.ರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ.ರಾಜು ಅವರ ಈ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...