alex Certify ʼಲಾಕ್ ಡೌನ್ʼ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ತೆರಬೇಕಾದೀತು ಭಾರಿ ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ಡೌನ್ʼ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ತೆರಬೇಕಾದೀತು ಭಾರಿ ದಂಡ..!

ಲಾಕ್ ಡೌನ್ ಆದಾಗಿನಿಂದಲೂ ಒಂದಿಷ್ಟು ರಸ್ತೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಎಲ್ಲಾ ಫ್ಲೈ ಓವರ್ ಗಳನ್ನು ಬ್ಯಾರಿಕೇಡ್ ನಿಂದ ಕ್ಲೋಸ್ ಮಾಡಲಾಗಿತ್ತು. ಆದರೆ ಲಾಕ್ ಡೌನ್ ಮೂರನೇ ಹಂತದಲ್ಲಿ ಒಂದಿಷ್ಟು ವಿನಾಯಿತಿ ನೀಡಲಾಗಿದೆ. ಹೀಗಾಗಿ ಮುಖ್ಯ ರಸ್ತೆಗಳನ್ನು ತೆರೆಯಲಾಗಿದೆ. ಈ‌ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಇಲ್ಲ ಅಂತ ಸಂಚಾರ ನಿಯಮ ಉಲ್ಲಂಘನೆ ಮಾಡಿದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ಕಟ್ಟಬೇಕಾಗುತ್ತದೆ.

ಹೌದು ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಾರೆ ಎಂಬ ಕಾರಣದಿಂದಲೇ ಆಯಕಟ್ಟಿನ ಜಾಗಗಳಲ್ಲಿ ಕ್ಯಾಮರಾ ಇರಿಸಿದ್ದಾರೆ ಪೊಲೀಸರು. ಈ ಕ್ಯಾಮರಾದಲ್ಲಿ ಸಂಚಾರ ಉಲ್ಲಂಘನೆ ಮಾಡಿ ಸಿಕ್ಕಾಕಿಕೊಂಡವರಿಗೆ ದಂಡ ತಪ್ಪಿದ್ದಲ್ಲ. ಹೀಗೆ ಲಾಕ್ ಡೌನ್ ಸಮಯದಲ್ಲಿ ಸುಮಾರು 2 ಲಕ್ಷ ಕೇಸ್ ಗಳು ದಾಖಲಾಗಿವೆ. ಹೀಗಾಗಿ ಉಲ್ಲಂಘನೆ ಮಾಡಿದ ಎಲ್ಲರ ಮನೆಗೆ ನೋಟಿಸ್ ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗಿವೆ.

ಇನ್ನು ಲಾಕ್ ಡೌನ್ ಸಮಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿತ್ತು. ಆ ವಾಹನಗಳನ್ನು ವಾಪಸ್ ಪಡೆಯಲು ದಂಡ ಕೊಡುವುದರ ಜೊತೆಗೆ ಸರಿಯಾದ ದಾಖಲೆ ಹಾಗೂ ಹಿಂದೆ ಸಂಚಾರ ಉಲ್ಲಂಘನೆ ಮಾಡಿದ್ದ ಕೇಸ್ ಗಳಿದ್ದರೆ ಅವುಗಳ ದಂಡವನ್ನು ಕ್ಲಿಯರ್ ಮಾಡಬೇಕು. ಹೀಗಾಗಿ ಸಂಚಾರ ಉಲ್ಲಂಘನೆ ಮಾಡುವ ಮುನ್ನ ಒಮ್ಮೆ ಯೋಚಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...