alex Certify ʼಲಾಕ್ ​ಡೌನ್ʼ​ ಅವಧಿಯಲ್ಲಿ ವಿದ್ಯಾರ್ಥಿಯಿಂದ ಸಿದ್ದವಾಯ್ತು ಎಲೆಕ್ಟ್ರಿಕ್​ ಬೈಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ​ಡೌನ್ʼ​ ಅವಧಿಯಲ್ಲಿ ವಿದ್ಯಾರ್ಥಿಯಿಂದ ಸಿದ್ದವಾಯ್ತು ಎಲೆಕ್ಟ್ರಿಕ್​ ಬೈಕ್​

2020ರಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಿಂದ ಮುಕ್ತಿ ಸಿಕ್ಕಷ್ಟು ಈ ಹಿಂದಿನ ಯಾವ ವರ್ಷದಲ್ಲೂ ಸಿಕ್ಕಿಲ್ಲ. ರಜಾ ಅವಧಿಯಲ್ಲಿ ಕೆಲ ಮಕ್ಕಳು ಆಟ ಆಡೋದ್ರಲ್ಲೇ ಮಗ್ನರಾಗಿದ್ರೆ ಇನ್ನೂ ಕೆಲವರು ಮೊಬೈಲ್​, ಕಂಪ್ಯೂಟರ್​ಗಳಲ್ಲಿ ಕಳೆದು ಹೋಗಿದ್ರು. ಆದರೆ ಲಾಕ್​ಡೌನ್​ ಅವಧಿಯಲ್ಲಿ ಬೆಳಗಾವಿಯ 15 ವರ್ಷದ ಬಾಲಕ ಅತ್ಯಂತ ಚೆನ್ನಾಗಿ ಬಳಸಿಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ 10ನೇ ತರಗತಿ ವಿದ್ಯಾರ್ಥಿ ಪ್ರಥಮೇಶ ಸುತಾರಾ ಎಂಬಾತ ಎಲೆಕ್ಟ್ರಿಕ್​ ಬೈಕ್​ ಒಂದನ್ನ ಆವಿಷ್ಕಾರ ಮಾಡಿದ್ದಾನೆ. ಈ ಬೈಕ್​​ನಲ್ಲಿರುವ ಬ್ಯಾಟರಿಯನ್ನ ಒಂದು ಬಾರಿಗೆ ಚಾರ್ಜ್​ ಮಾಡಿದ್ರೆ ಅದು 40 ಕಿಲೋಮೀಟರ್​​ವರೆಗೆ ಓಡಲಿದೆ.

ಲಾಕ್​ಡೌನ್​ ಅವಧಿಯಲ್ಲಿ ಸುಮ್ಮನೇ ಮನೆಯಲ್ಲಿ ಕೂತು ಕಾಲಹರಣ ಮಾಡೋದನ್ನ ಬಿಟ್ಟು ಏನಾದರೂ ಉಪಯೋಗಕಾರಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದ ಪ್ರಥಮೇಶ ತನ್ನ ಪೋಷಕರ ಬಳಿ ಎಲೆಕ್ಟ್ರಿಕ್​ ಬೈಕ್​ ಸಿದ್ಧಪಡಿಸಲಿದ್ದೇನೆ ಎಂದು ಹೇಳಿದ್ದಾನೆ. ಈತನ ತಂದೆ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿದ್ದು ತನ್ನ ಮಗನ ಅನ್ವೇಷಣೆಗೆ ಪ್ರೋತ್ಸಾಹ ನೀಡಿದ್ದಾರೆ.

ಬೈಕ್​ನ ಬಿಡಿ ಭಾಗಗಳು ಹಾಗೂ 48 ವೋಲ್ಟೇಜ್​ನ ಲಿಡ್​​ ಆಸಿಡ್​ ಬ್ಯಾಟರಿ, 48 ವೋಲ್ಟೇಜ್​ನ ಮೋಟಾರ್​ ಹಾಗೂ 750 ವಾಟ್​ ಸಾಮರ್ಥ್ಯದ ಮೋಟಾರ್​ಗಳನ್ನ ಬಳಸಿ ಪ್ರಥಮೇಶ ಈ ಬೈಕ್​ ಸಿದ್ಧಪಡಿಸಿದ್ದಾನೆ. ಸಂಪೂರ್ಣವಾಗಿ ಈ ಬೈಕ್​ನ್ನು ತಯಾರಿಸಲು ಪ್ರಥಮೇಶ 25 ಸಾವಿರ ರೂಪಾಯಿ ವ್ಯಯಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...